Job Description: ➤ ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), 2025-26ರ ಆರ್ಥಿಕ ವರ್ಷಕ್ಕೆ (FY26) ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಭಾರಿ ಮೊತ್ತದ ಲಾಭಾಂಶವನ್ನು (Dividend) ಪಾವತಿಸಿದೆ. ➤ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಬಿಐ ಅಧ್ಯಕ್ಷರಾದ ಸಿ.ಎಸ್. ಶೆಟ್ಟಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ₹8,813 ಕೋಟಿ ಹಣದ ಲಾಭಾಂಶದ ಚೆಕ್ ಅನ್ನು ಹಸ್ತಾಂತರಿಸಿದ್ದು, ಮಾರ್ಚ್ 31, 2026 ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಪ್ರತಿ ಈಕ್ವಿಟಿ ಷೇರಿಗೆ ₹17.35 ಲಾಭಾಂಶ ಘೋಷಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭಾರತ ಸರ್ಕಾರವು ಸುಮಾರು 55% ರಷ್ಟು ಈಕ್ವಿಟಿ ಷೇರು ಹೂಡಿಕೆ ಹೊಂದುವ ಮೂಲಕ ಅತಿ ದೊಡ್ಡ ಷೇರುದಾರನಾಗಿರುವುದರಿಂದ ಈ ಲಾಭಾಂಶದ ಸಿಂಹಪಾಲು ಸರ್ಕಾರಕ್ಕೆ ಸೇರಿದೆ.➤ 2025-26ರಲ್ಲಿ ಎಸ್‌ಬಿಐ ಆರ್ಥಿಕ ಸಾಧನೆ (Financial Performance): ನಿವ್ವಳ ಲಾಭ (Net Profit): 2025-26ರ ಆರ್ಥಿಕ ವರ್ಷದಲ್ಲಿ ಎಸ್‌ಬಿಐ ₹80,032 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 12.88% ರಷ್ಟು ಹೆಚ್ಚಳವಾಗಿದೆ. ಕಾರ್ಯಾಚರಣೆಯ ಲಾಭ (Operating Profit): ಬ್ಯಾಂಕಿನ ಕಾರ್ಯಾಚರಣೆಯ ಲಾಭವು ವರ್ಷದಿಂದ ವರ್ಷಕ್ಕೆ 11.25% ಹೆಚ್ಚಾಗಿದ್ದು, ₹1,23,015 ಕೋಟಿ ತಲುಪಿದೆ. ಹಿಂದಿನ ವರ್ಷದ ಲಾಭಾಂಶ: 2024-25ರ ಆರ್ಥಿಕ ವರ್ಷದಲ್ಲಿ ಎಸ್‌ಬಿಐ ಸರ್ಕಾರಕ್ಕೆ ₹8,076.84 ಕೋಟಿ ಲಾಭಾಂಶ ನೀಡಿತ್ತು. ಆದರೆ ಈ ಬಾರಿ ದಾಖಲೆಯ ₹8,813 ಕೋಟಿ ಪಾವತಿಸಿದೆ.ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ