* ಭಾರತೀಯ ಜೀವ ವಿಮಾ ನಿಗಮವು (LIC)ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI)ಅನ್ನೂ ಹಿಂದಿಕ್ಕಿ ಭಾರತದಲ್ಲಿಯೇ ಎಲ್‌ಐಸಿಯು ಮಾರುಕಟ್ಟೆ ಕ್ಯಾಪ್‌ ಮಾನದಂಡದಲ್ಲಿ ಅತಿ ಹೆಚ್ಚು ಮೌಲ್ಯ ಹೊಂದಿರುವ ಸಾರ್ವಜನಿಕ ವಲಯದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.* ಎಲ್‌ಐಸಿ ಮಾರುಕಟ್ಟೆ ಕ್ಯಾಪ್‌ 5.8 ಲಕ್ಷ ಕೋಟಿ ರೂ. ತಲುಪಿತು. ಎಸ್‌ಬಿಐ ಮಾರುಕಟ್ಟೆ ಕ್ಯಾಪ್‌ (ಬಿಎಸ್‌ಇ) 5.62 ಲಕ್ಷ ಕೋಟಿ ರೂ. ಇರುವುದರಿಂದ ಭಾರತದಲ್ಲಿಯೇ ಎಲ್‌ಐಸಿಯು ಮಾರುಕಟ್ಟೆ ಕ್ಯಾಪ್‌ ಮಾನದಂಡದಲ್ಲಿ ಅತಿ ಹೆಚ್ಚು ಮೌಲ್ಯ ಹೊಂದಿರುವ ಸಾರ್ವಜನಿಕ ವಲಯದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.* 2022ರಲ್ಲಿ ಎಲ್‌ಐಸಿಯು ಮೊದಲ ಬಾರಿಗೆ ಐಪಿಒ ಆರಂಭಿಸಿತ್ತು. ಒಂದು ಷೇರಿಗೆ 904 ರೂ. ಪಾವತಿಸಿ ಹೂಡಿಕೆದಾರರು ಖರೀದಿಸಿದ್ದರು.* ಕಳೆದ ವರ್ಷದ ನವೆಂಬರ್‌ನಿಂದಲೂ ಎಲ್‌ಐಸಿ ಷೇರುಗಳ ಮೌಲ್ಯವು ಏರಿಕೆಯಾಗುತ್ತಲೇ ಇತ್ತು. ಕಳೆದ ನವೆಂಬರ್‌ನಿಂದ ಇದುವರೆಗೆ ಎಲ್‌ಐಸಿ ಷೇರುಗಳ ಮೌಲ್ಯವು ಶೇ.50ರಷ್ಟು ಏರಿಕೆಯಾಗಿದೆ. 2023ರ ಮಾರ್ಚ್‌ನಲ್ಲಿ ಷೇರುಗಳ ಮೌಲ್ಯವು 530 ರೂ.ಗೆ ಇಳಿಕೆಯಾಗಿತ್ತು.* ಭಾರತೀಯ ಜೀವ ವಿಮಾ ನಿಗಮ (LIC) ಕುರಿತು ಭಾರತೀಯ ಸಂಸತ್ತಿನಲ್ಲಿ ಲೈಫ್ ಇನ್ಶುರೆನ್ಸ್ ಆಫ್ ಇಂಡಿಯಾ ಆಕ್ಟ್ ಅನ್ನು ಅಂಗೀಕರಿಸುವ ಮೂಲಕ 1956 ರಲ್ಲಿ LIC ಅನ್ನು ಸ್ಥಾಪಿಸಲಾಯಿತು. ಎಲ್‌ಐಸಿಯ ಪ್ರಧಾನ ಕಛೇರಿ ಮುಂಬೈನಲ್ಲಿದೆ.