* ನವಿಕರಿಸಬಹುದಾದ ಇಂಧನ ಅಳವಡಿಕೆಯಲ್ಲಿ ದಿಯು ರಾಷ್ಟ್ರೀಯ ಮಾದರಿಯಾಗಿದ್ದು, ತನ್ನ ಸಂಪೂರ್ಣ ಹಗಲಿನ ವಿದ್ಯುತ್ ಬೇಡಿಕೆಯನ್ನು ಸೌರಶಕ್ತಿಯಿಂದ ಪೂರೈಸಲಾಗುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.* ದಿಯು 11.88 ಮೆಗಾವ್ಯಾಟ್ ಮೇಲ್ಚಾವಣಿ ಸಾಮರ್ಥ್ಯವನ್ನು ಸಾಧಿಸಿ, ಭಾರತದ ಮೊದಲ ಸಂಪೂರ್ಣ ಸೌರಶಕ್ತಿ ಅವಲಂಬಿತ ಜಿಲ್ಲೆಯಾಗಿದ್ದು, ಮಹತ್ವದ ಮೈಲಿಗಲ್ಲು ತಲುಪಿದೆ ಎಂದು ಅವರು ಹೇಳಿದರು.* ಸಚಿವರು ದಿಯುನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ಫುಡಾಮ್ಲಲ್ಲಿರುವ 9 ಮೆಗಾವ್ಯಾಟ್ ಸೌರ ಪಾರ್ಕ್ ಸೇರಿ ವಿವಿಧ ಸೌಲಭ್ಯಗಳಿಗೆ ಭೇಟನೀಡಿದರು.* ಫುಡಮ್ ಸೌರ ಪಾರ್ಕ್ ಪ್ರಸರಣ ನಷ್ಟವನ್ನು ಕಡಿಮೆ ಮಾಡುವುದು, ಶುದ್ಧ ಇಂಧನ ಪೂರೈಕೆ ಹಾಗೂ ಕಡಿಮೆ ವಿದ್ಯುತ್ ವೆಚ್ಚದ ಮೂಲಕ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಚಿವರು ಹೇಳಿದರು.