* ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ರಿಯಾದ್ ಭೇಟಿಯ ಸಂದರ್ಭದಲ್ಲಿ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ (Saudi Arabia – Pakistan) ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ‘ಇಬ್ಬರಲ್ಲಿ ಯಾರ ಮೇಲೆಯೇ ಯುದ್ಧ ನಡೆಯಲಿ, ಎರಡೂ ದೇಶಗಳ ವಿರುದ್ಧ ಆಕ್ರಮಣ ಎಂದು ಪರಿಗಣಿಸುವುದು’ ಒಪ್ಪಂದದ ಪ್ರಮುಖ ಷರತ್ತಾಗಿದೆ.* ಎಲ್ಲಾ ಮಿಲಿಟರಿ ವಿಧಾನಗಳನ್ನು ಒಳಗೊಂಡಿರುವ ಈ ಒಪ್ಪಂದವನ್ನು ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅನುಮೋದಿಸಿದ್ದಾರೆ. * ದೋಹಾದಲ್ಲಿ ಇಸ್ರೇಲ್ ವೈಮಾನಿಕ ದಾಳಿಯ ನಂತರ ಹೆಚ್ಚುತ್ತಿರುವ ಕೊಲ್ಲಿ ಉದ್ವಿಗ್ನತೆಯ ಮಧ್ಯೆ ಈ ಒಪ್ಪಂದ ಬಂದಿದೆ. * ಈ ಒಪ್ಪಂದಗಳು ಭಾರತದ ಭದ್ರತೆ ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆ ಮೇಲೆ ಬೀರುವ ಪರಿಣಾಮಗಳ ಬೆಳವಣಿಗೆಗಳ ಬಗ್ಗೆ ಅಧ್ಯಯನ ಮಾಡಲಾಗುವುದು. ಸರ್ಕಾರವು ಭಾರತದ ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ರಾಷ್ಟ್ರೀಯ ಭದ್ರತೆಯನ್ನು ಖಾತರಿಪಡಿಸುತ್ತದೆ ಎಂದಿದ್ದಾರೆ.