* ಲೋಕಸಭೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿದ 17 ಮಂದಿ ಸಂಸದರು ಹಾಗೂ ಎರಡು ಸಂಸದೀಯ ಸಮಿತಿಗಳಿಗೆ 'ಸಂಸದ ರತ್ನ–2025' ಪ್ರಶಸ್ತಿ ಜುಲೈ 26 ರಂದು ನೀಡಲಾಗಿದೆ.* ಬಿಜೆಪಿಯ ಭರ್ತೃಹರಿ ಮಹತಾಬ್, ಕ್ರಾಂತಿಕಾರ ಸಮಾಜವಾದಿ ಪಕ್ಷದ ಎನ್.ಕೆ. ಪ್ರೇಮಚಂದ್ರನ್, ಎನ್ಸಿಪಿ ಶರದ್ ಪವಾರ್ ಬಣದ ಸುಪ್ರಿಯಾ ಸುಳೆ ಮತ್ತು ಶಿವಸೇನೆಯ ಶ್ರೀರಂಗ ಅಪ್ಪ ಬಾರ್ನೆ ಅವರಿಗೆ ಪ್ರಶಸ್ತಿ ಲಭಿಸಿದೆ.* ಸ್ಮಿತಾ ವಾಘ್, ಮೇಧಾ ಕುಲಕರ್ಣಿ, ಪ್ರವೀಣ್ ಪಟೇಲ್, ರವಿಕಿಶನ್, ನಿಶಿಕಾಂತ್ ದುಬೆ, ಬಿದ್ಯುತ್ ಮಹಾತೊ, ಪಿ.ಪಿ. ಚೌಧರಿ, ಮದನ್ ರಾಥೋಡ್, ದಿಲೀಪ್ ಸೈಕಿಯಾ, ಅರವಿಂದ ಸಾವಂತ್, ನರೇಶ್ ಮಹಸ್ಕೆ, ವರ್ಷಾ ಗಾಯಕ್ವಾಡ್, ಸಿ.ಎನ್. ಅಣ್ಣಾದೊರೈ ಮೊದಲಾದವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.* ಶಾಸನ ಮೇಲ್ವಿಚಾರಣೆಯೆಂದು ಹಣಕಾಸು ಮತ್ತು ಕೃಷಿ ವಿಷಯಗಳ ಸ್ಥಾಯಿ ಸಮಿತಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಭರ್ತೃಹರಿ ಮಹತಾಬ್ ಹಣಕಾಸು ಸಮಿತಿಗೆ ಹಾಗೂ ಚರಣ್ಜಿತ್ ಸಿಂಗ್ ಚನ್ನಿ ಕೃಷಿ ಸಮಿತಿಗೆ ಅಧ್ಯಕ್ಷರಾಗಿದ್ದಾರೆ.
* ಸತತ ಮೂರು ಅವಧಿಗಳ ಸೇವೆಯು ರಾಷ್ಟ್ರದ ಸಂಸದೀಯ ಪ್ರಜಾಪ್ರಭುತ್ವಕ್ಕೆ ನೀಡಿದ ಕೊಡುಗೆ ಎಂದು ಗುರುತಿಸಿ ನಾಲ್ಕು ತೀರ್ಪುಗಾರರ ವಿಶೇಷ ಪ್ರಶಸ್ತಿಗಳನ್ನು ಸಹ ನೀಡಲಾಗಿದೆ.