Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
SAFF U-19 ಮಹಿಳಾ ಫುಟ್ಬಾಲ್: ಬಾಂಗ್ಲಾದೇಶವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ
Authored by:
Akshata Halli
Date:
10 ಫೆಬ್ರುವರಿ 2026
➤
ನೇಪಾಳದ ಪೋಖರಾದಲ್ಲಿ ನಡೆದ
ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (SAFF) 19 ವರ್ಷದೊಳಗಿನ ಮಹಿಳಾ ಚಾಂಪಿಯನ್ಶಿಪ್
ನಲ್ಲಿ ಭಾರತದ ಯುವ ಟೈಗ್ರೆಸ್ಗಳು ಭರ್ಜರಿ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು
4-0
ಗೋಲುಗಳ ಅಂತರದಿಂದ ಸೋಲಿಸಿ ಭಾರತ ಐತಿಹಾಸಿಕ ಜಯ ಸಾಧಿಸಿದೆ.
# ಗೋಲು ಗಳಿಸಿದವರು:
ಜುಲನ್ ನೊಂಗ್ಮೈತೆಮ್ (ನಾಯಕಿ) - 42ನೇ ನಿಮಿಷ, ಎಲಿಜಬೆತ್ ಲಕ್ರಾ - 63ನೇ ನಿಮಿಷ (ಪೆನಾಲ್ಟಿ), ಪರ್ಲ್ ಫೆರ್ನಾಂಡಿಸ್ - 68ನೇ ನಿಮಿಷ, ಅನ್ವಿತಾ ರಘುರಾಮನ್ - 83ನೇ ನಿಮಿಷ.
➤
ಭಾರತವು ತನ್ನ
17 ವರ್ಷದೊಳಗಿನ (U-17)
ತಂಡವನ್ನು ಈ 19 ವರ್ಷದೊಳಗಿನ ಟೂರ್ನಿಗೆ ಕಳುಹಿಸಿತ್ತು.
ಇದು ಈ ವರ್ಷದ ಕೊನೆಯಲ್ಲಿ ನಡೆಯಲಿರುವ
AFC U-17 ಮಹಿಳಾ ಏಷ್ಯನ್ ಕಪ್
ಗೆ ಪೂರ್ವಭಾವಿ ಸಿದ್ಧತೆಯ ಭಾಗವಾಗಿತ್ತು.
➤
ಪ್ರಮುಖ ಪ್ರಶಸ್ತಿ ವಿಜೇತರು:
1. ಚಾಂಪಿಯನ್ಸ್ : ಭಾರತ
2. ಅತ್ಯುತ್ತಮ ಗೋಲ್ಕೀಪರ್ : ಮುನ್ನಿ (ಭಾರತ)
3. ಫೇರ್ ಪ್ಲೇ ಅವಾರ್ಡ್ : ಭಾರತ
4. ಟೂರ್ನಿಯ ಅತ್ಯುತ್ತಮ ಆಟಗಾರ್ತಿಅಲ್ಪೀ ಅಕ್ತರ್ (ಬಾಂಗ್ಲಾದೇಶ)
➤
ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (SAFF)
: 1997 ರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಮಾಲ್ಡೀವ್ಸ್ ಎಂಬ ಆರು ರಾಷ್ಟ್ರಗಳೊಂದಿಗೆ ಸ್ಥಾಪನೆಯಾಯಿತು. ನಂತರ 2000 ರಲ್ಲಿ ಭೂತಾನ್ ಈ ಒಕ್ಕೂಟಕ್ಕೆ ಸೇರ್ಪಡೆಯಾದರೆ, ಅಫ್ಘಾನಿಸ್ತಾನವು 2005 ರಲ್ಲಿ ಸದಸ್ಯ ರಾಷ್ಟ್ರವಾಗಿ ಸೇರಿ ಮುಂದೆ 2015 ರಲ್ಲಿ ಸೆಂಟ್ರಲ್ ಏಷ್ಯನ್ ಫುಟ್ಬಾಲ್ ಅಸೋಸಿಯೇಷನ್ (CAFA) ಗೆ ಸ್ಥಳಾಂತರಗೊಂಡಿತು. ಈ ಫೆಡರೇಶನ್ ಅಡಿಯಲ್ಲಿ ನಡೆಯುವ ಪ್ರತಿಷ್ಠಿತ ಟೂರ್ನಿಯು 1993 ರಲ್ಲಿ 'SAARC ಗೋಲ್ಡ್ ಕಪ್' ಆಗಿ ಆರಂಭಗೊಂಡು, ಕಾಲಕ್ರಮೇಣ 'ದಕ್ಷಿಣ ಏಷ್ಯಾ ಗೋಲ್ಡ್ ಕಪ್' (1995) ಮತ್ತು 'SAFF ಗೋಲ್ಡ್ ಕಪ್' (1997-2005) ಎಂದು ಮರುನಾಮಕರಣಗೊಂಡಿತು. ಅಂತಿಮವಾಗಿ 2008 ರಿಂದ ಇದನ್ನು ಅಧಿಕೃತವಾಗಿ 'SAFF ಚಾಂಪಿಯನ್ಶಿಪ್' ಎಂದು ಕರೆಯಲಾಗುತ್ತಿದೆ, ಇದು ದಕ್ಷಿಣ ಏಷ್ಯಾದ ಫುಟ್ಬಾಲ್ ಕ್ರೀಡೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ
Take Quiz
Loading...