* 19 ವರ್ಷದೊಳಗಿನವರ ಸ್ಯಾಫ್ SAFF U-19 ಚಾಂಪಿಯನ್ಷಿಪ್ನ ಆತಿಥ್ಯವನ್ನು ಅರುಣಾಚಲ ಪ್ರದೇಶ ವಹಿಸಿದೆ. ಈಶಾನ್ಯದ ಈ ರಾಜ್ಯ ಮೊದಲ ಬಾರಿ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಆತಿಥ್ಯ ಪಡೆದಿದ್ದು ಯುಪಿಯಾದ ಗೋಲ್ಡನ್ ಜುಬಿಲಿ ಮೈದಾನದಲ್ಲಿ ಮೇ 8ರಿಂದ 17ರವರೆಗೆ ನಡೆಯಲಿದೆ. * ಭಾರತ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮಾಲ್ಡೀವ್ಸ್, ಪಾಕಿಸ್ತಾನ ಮತ್ತು ಶ್ರೀಲಂಕಾ - ಈ ಏಳು ಸದಸ್ಯ ರಾಷ್ಟ್ರಗಳನ್ನೊಳಗೊಂಡ ಸೌತ್ ಏಷ್ಯನ್ ಫುಟ್ಬಾಲ್ ಫೆಡರೇಷನ್ (ಸ್ಯಾಫ್) ತಮ್ಮ ವಲಯದಲ್ಲಿ ಫುಟ್ಬಾಲ್ ಆಟವನ್ನು ಉತ್ತೇಜಿಸುವ ಉದ್ದೇಶದಿಂದ ಈ ಟೂರ್ನಿ ನಡೆಸಲಾಗುತ್ತಿದೆ. 2025ರ ಆವೃತ್ತಿಯಲ್ಲಿ ಪ್ರಶಸ್ತಿಗಾಗಿ ಆರು ತಂಡಗಳು ಸೆಣಸಲಿವೆ. * ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಪ್ರಧಾನ ಕಾರ್ಯದರ್ಶಿ ಅನಿಲ್ ಪ್ರಭಾಕರನ್ ಅವರು ಅರುಣಾಚಲ ಪ್ರದೇಶ ಫುಟ್ಬಾಲ್ ಅಸೋಸಿಯೇಷನ್ (ಎಪಿಎಫ್ಎ) ಕಾರ್ಯದರ್ಶಿ ಕಿಪಾ ಅಜಯ್ ಅವರಿಗೆ ಹಂಚಿಕೆ ಪತ್ರವನ್ನು ಅಧಿಕೃತವಾಗಿ ಹಸ್ತಾಂತರಿಸಿದರು.* ಅಧಿಕಾರಿಗಳು ಈ ನಿರ್ಧಾರವನ್ನು ಅರುಣಾಚಲಕ್ಕೆ ಒಂದು ಪ್ರಮುಖ ಮೈಲಿಗಲ್ಲು ಎಂದು ಶ್ಲಾಘಿಸಿದೆ. * ಈ ಪಂದ್ಯಾವಳಿಯು ಫುಟ್ಬಾಲ್ ಮೂಲಸೌಕರ್ಯವನ್ನು ಹೆಚ್ಚಿಸುವ, ಯುವ ಆಟಗಾರರಿಗೆ ಸ್ಫೂರ್ತಿ ನೀಡುವ ಮತ್ತು ಅರುಣಾಚಲ ಪ್ರದೇಶದಲ್ಲಿ ಕ್ರೀಡಾ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿರೀಕ್ಷೆಯಿದೆ.* ಎಪಿಎಫ್ಎ, ಎಐಎಫ್ಎಫ್ ಮತ್ತು ಸ್ಥಳೀಯ ಅಧಿಕಾರಿಗಳ ಸಹಯೋಗದೊಂದಿಗೆ, ಈ ಕಾರ್ಯಕ್ರಮಕ್ಕೆ ಉನ್ನತ ಗುಣಮಟ್ಟವನ್ನು ಖಚಿತಪಡಿಸಿದೆ.