* ಹಿರಿಯ ಸಾಹಿತಿ ನಾ. ಡಿಸೋಜ ಅವರು ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ''ಪಂಪ ಪ್ರಶಸ್ತಿ''ಗೆ ಆಯ್ಕೆಯಾಗಿದ್ದಾರೆ. ನಾ.ಡಿಸೋಜ ಅವರು ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.* ಸಾಹಿತಿಗಳಾದ ಹಾಸನದ ಬಾನು ಮುಷ್ತಾಕ್''ಅತ್ತಿಮಬ್ಬೆ ಪ್ರಶಸ್ತಿ'', ಸದಾನಂದ ಸುವರ್ಣ ''ಬಿ ವಿ ಕಾರಂತ್'' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.* 2022-23ನೇ ಸಾಲಿ‌ನ ಪಂಪ ಪ್ರಶಸ್ತಿಗೆ ಡಾ.ಎಸ್.ಆರ್.ರಾಮಸ್ವಾಮಿ ಆಯ್ಕೆಯಾಗಿದ್ದರು.* ಕರ್ನಾಟಕ ರಾಜ್ಯದಲ್ಲಿ ಸಾಹಿತ್ಯ ಪ್ರಶಸ್ತಿಯಾಗಿದೆ.ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರವು 1987 ರಲ್ಲಿ ಸ್ಥಾಪಿಸಿತು.* ಕನ್ನಡದ ಮೊದಲ ಕವಿ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ* ಕುವೆಂಪು ಅವರು ಭಾರತೀಯ ಮಹಾಕಾವ್ಯ ರಾಮಾಯಣದ ಆಧುನಿಕ ನಿರೂಪಣೆಯಾದ ಶ್ರೀ ರಾಮಾಯಣ ದರ್ಶನಂ (1949) ಕೃತಿಗಾಗಿ ಮೊದಲ ಪ್ರಶಸ್ತಿಯನ್ನು ಪಡೆದರು.