* ಸಮುದ್ರದಲ್ಲಿ ತೈಲ ಸೋರಿಕೆ (Oil Spill) ಸಂಭವಿಸುವುದು ಜಾಗತಿಕ ಪರಿಸರದ ಪ್ರಮುಖ ಸಮಸ್ಯೆಯಾಗಿದೆ. ತೈಲದ ಸೋರಿಕೆಯಿಂದ ಸಮುದ್ರದ ಮೇಲ್ಮೈಯಲ್ಲಿ ಒಂದು ದಪ್ಪ ಪದರ ನಿರ್ಮಾಣವಾಗುತ್ತದೆ, ಇದು ನೀರಿನ ಆಮ್ಲಜನಕ ಚಲನವಲನವನ್ನು ತಡೆಯುತ್ತದೆ.* ಇದರಿಂದ ಮೀನುಗಳು, ಶೈವಲಗಳು, ಸಮುದ್ರ ಪಕ್ಷಿಗಳು ಹಾಗೂ ಇತರ ಜಲಜೀವಿಗಳ ಜೀವನಕ್ಕೆ ಭಾರೀ ಅಪಾಯ ಉಂಟಾಗುತ್ತದೆ. ಈ ಸಮಸ್ಯೆಯನ್ನು ಶಾಶ್ವತವಾಗಿ ನಿಯಂತ್ರಿಸಲು ಐಐಟಿ ಗುವಾಹಟಿಯ  ವಿಜ್ಞಾನಿಗಳು ನವೀನ ತಂತ್ರಜ್ಞಾನಗಳತ್ತ ಸಂಶೋಧನೆಗೆ ಹೆಜ್ಜೆ ಹಾಕಿದ್ದಾರೆ.* ಭಾರತದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT) ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ತೈಲ ಸೋರಿಕೆ ನಿವಾರಣೆಗೆ ಹೊಸ ಉಪಕರಣಗಳನ್ನು ಅಭಿವೃದ್ಧಿಪಡಿಸುತ್ತಿವೆ.* ಫೇಸ್ ಸೆಲೆಕ್ಟಿವ ಆರ್ಗನೋಜಿಲೇಟರ ಅಣು ತಂತ್ರಜ್ಞಾನವು ತೈಲವನ್ನು ಡೀಸೆಲ್ ಮತ್ತು ಸೀಮೆಎಣ್ಣೆ ಎಂದು ಬೇರ್ಪಡಿಸುತ್ತದೆ.ನೀರಿನಲ್ಲಿ ಸೋಪಿನ ಅಣುಗಳು ಹೇಗೆ ಸಂಘಟಿತವಾಗಿರುವ ರೀತಿಯಲ್ಲಿ ಈ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ.* ಈ ನವೀನ ತಂತ್ರವು ಪೆಟ್ರೋಲ್ ನಲ್ಲಿ ಸೀಮೆಎಣ್ಣೆ ಮತ್ತು ಮಾಲಿನ್ಯವನ್ನು ಪತ್ತೆಹಚ್ಚುವುದು.ಬಹುಮುಖ್ಯವಾಗಿ ಇದು ನೀರಿನಲ್ಲಿರುವ ತೈಲದ ಅಣುವನ್ನು ಹೀರಿಕೊಳ್ಳುವ ಮತ್ತು ಅದನ್ನು ಘನೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.* ಇದರಿಂದ ತೈಲ ಸೋರಿಕೆಯಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.ಈ ಸೋರಿಕೆಯಿಂದಾಗಿ ಸಮುದ್ರದ ಜೀವಿಗಳು ಮತ್ತು ಕರಾವಳಿಯ ಪ್ರದೇಶಗಳಿಗೆ ಸಾಕಷ್ಟು ಹಾನಿ ಉಂಟಾಗುತ್ತಿದೆ.* 2024 ರಲ್ಲಿ ಸಮುದ್ರದಲ್ಲಿ 10 ,000 ಸಾವಿರ ಟನ್ ತೈಲ ಸೋರಿಕೆಯಾಗಿ ಸಮುದ್ರ ಜೀವಿಗಳ ಮೇಲೆ ಮಾರಕ ಪರಿಣಾಮ ಬೀರಿದೆ.ಸಮುದ್ರದಲ್ಲಿ ತೈಲ ಸೋರಿಕೆ ತಡೆಗಟ್ಟುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.* ಇದನ್ನು ಸ್ವಚ್ಛಗೊಳಿಸಲು ಯೋಜನೆಗೊಂಡ ತಂತ್ರಜ್ಞಾನಗಳು ಸಹ ತೈಲ ಸೋರಿಕೆ ಮಾಡುತ್ತಿರುವುದು ಇನ್ನು ದೊಡ್ಡ ಸಮಸ್ಯೆಗೆ ಸೃಷ್ಟಿಗೆ ಕಾರಣವಾಗಿದೆ.ಹೀಗಾಗಿ ಹೊಸ ತಂತ್ರಜ್ಞಾನ ನೆರವಾಗಲಿದೆ ಎಂಬ ಆಶಯ ವಿಜ್ಞಾನಿಗಳದ್ದಾಗಿದೆ.🔹 ನವೀನ ತಂತ್ರಜ್ಞಾನಗಳು ತೈಲ ಸೋರಿಕೆ ನಿವಾರಣೆಗೆ ಕ್ರಮಗಳು:1️⃣ ನಾನೊಟೆಕ್ನಾಲಜಿ ಆಧಾರಿತ ಶೋಧನೆ2️⃣ ಮ್ಯಾಗ್ನೆಟಿಕ್ ಸ್ಪಾಂಜ್ (Magnetic Sponge)3️⃣ ಬಯೋ-ರಿಮಿಡಿಯೇಷನ್ ತಂತ್ರಜ್ಞಾನ4️⃣ ಡ್ರೋನ್ ಮತ್ತು ರೋಬೋಟಿಕ್ ಉಪಕರಣಗಳು5️⃣ ತೈಲ ಸೋರಿಕೆ ನಿರ್ವಹಣೆಗೆ ಕೃತಕ ಬುದ್ಧಿಮತ್ತೆ (AI) ಬಳಕೆ