Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಸಾಗರದಲ್ಲಿ ತೈಲ ಸೋರಿಕೆಯ ಪರಿಣಾಮ: ಜಾಗತಿಕ ಪರಿಸರ ಸಂಶೋಧನೆಗೆ ಹೊಸ ಅಧ್ಯಾಯ
12 ನವೆಂಬರ್ 2025
* ಸಮುದ್ರದಲ್ಲಿ
ತೈಲ ಸೋರಿಕೆ (Oil Spill)
ಸಂಭವಿಸುವುದು ಜಾಗತಿಕ ಪರಿಸರದ ಪ್ರಮುಖ ಸಮಸ್ಯೆಯಾಗಿದೆ. ತೈಲದ ಸೋರಿಕೆಯಿಂದ
ಸಮುದ್ರದ
ಮೇಲ್ಮೈಯಲ್ಲಿ ಒಂದು ದಪ್ಪ ಪದರ
ನಿರ್ಮಾಣವಾಗುತ್ತದೆ, ಇದು
ನೀರಿನ ಆಮ್ಲಜನಕ
ಚಲನವಲನವನ್ನು ತಡೆಯುತ್ತದೆ.
* ಇದರಿಂದ ಮೀನುಗಳು, ಶೈವಲಗಳು, ಸಮುದ್ರ ಪಕ್ಷಿಗಳು ಹಾಗೂ ಇತರ ಜಲಜೀವಿಗಳ ಜೀವನಕ್ಕೆ ಭಾರೀ ಅಪಾಯ ಉಂಟಾಗುತ್ತದೆ. ಈ ಸಮಸ್ಯೆಯನ್ನು ಶಾಶ್ವತವಾಗಿ ನಿಯಂತ್ರಿಸಲು
ಐಐಟಿ ಗುವಾಹಟಿಯ ವಿಜ್ಞಾನಿಗಳು
ನವೀನ ತಂತ್ರಜ್ಞಾನಗಳತ್ತ ಸಂಶೋಧನೆಗೆ ಹೆಜ್ಜೆ ಹಾಕಿದ್ದಾರೆ.
*
ಭಾರತದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT) ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ತೈಲ ಸೋರಿಕೆ ನಿವಾರಣೆಗೆ ಹೊಸ ಉಪಕರಣಗಳನ್ನು ಅಭಿವೃದ್ಧಿಪಡಿಸುತ್ತಿವೆ.
*
ಫೇಸ್ ಸೆಲೆಕ್ಟಿವ ಆರ್ಗನೋಜಿಲೇಟರ ಅಣು
ತಂತ್ರಜ್ಞಾನವು ತೈಲವನ್ನು
ಡೀಸೆಲ್ ಮತ್ತು ಸೀಮೆಎಣ್ಣೆ
ಎಂದು ಬೇರ್ಪಡಿಸುತ್ತದೆ.ನೀರಿನಲ್ಲಿ ಸೋಪಿನ ಅಣುಗಳು ಹೇಗೆ ಸಂಘಟಿತವಾಗಿರುವ ರೀತಿಯಲ್ಲಿ ಈ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ.
* ಈ ನವೀನ ತಂತ್ರವು ಪೆಟ್ರೋಲ್ ನಲ್ಲಿ ಸೀಮೆಎಣ್ಣೆ ಮತ್ತು ಮಾಲಿನ್ಯವನ್ನು ಪತ್ತೆಹಚ್ಚುವುದು.ಬಹುಮುಖ್ಯವಾಗಿ ಇದು ನೀರಿನಲ್ಲಿರುವ ತೈಲದ ಅಣುವನ್ನು ಹೀರಿಕೊಳ್ಳುವ ಮತ್ತು ಅದನ್ನು ಘನೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.
* ಇದರಿಂದ ತೈಲ ಸೋರಿಕೆಯಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.ಈ ಸೋರಿಕೆಯಿಂದಾಗಿ ಸಮುದ್ರದ ಜೀವಿಗಳು ಮತ್ತು ಕರಾವಳಿಯ ಪ್ರದೇಶಗಳಿಗೆ ಸಾಕಷ್ಟು ಹಾನಿ ಉಂಟಾಗುತ್ತಿದೆ.
*
2024 ರಲ್ಲಿ ಸಮುದ್ರದಲ್ಲಿ 10 ,000 ಸಾವಿರ ಟನ್ ತೈಲ ಸೋರಿಕೆ
ಯಾಗಿ ಸಮುದ್ರ ಜೀವಿಗಳ ಮೇಲೆ ಮಾರಕ ಪರಿಣಾಮ ಬೀರಿದೆ.ಸಮುದ್ರದಲ್ಲಿ ತೈಲ ಸೋರಿಕೆ ತಡೆಗಟ್ಟುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
* ಇದನ್ನು ಸ್ವಚ್ಛಗೊಳಿಸಲು ಯೋಜನೆಗೊಂಡ ತಂತ್ರಜ್ಞಾನಗಳು ಸಹ ತೈಲ ಸೋರಿಕೆ ಮಾಡುತ್ತಿರುವುದು ಇನ್ನು ದೊಡ್ಡ ಸಮಸ್ಯೆಗೆ ಸೃಷ್ಟಿಗೆ ಕಾರಣವಾಗಿದೆ.ಹೀಗಾಗಿ ಹೊಸ ತಂತ್ರಜ್ಞಾನ ನೆರವಾಗಲಿದೆ ಎಂಬ ಆಶಯ ವಿಜ್ಞಾನಿಗಳದ್ದಾಗಿದೆ.
🔹
ನವೀನ ತಂತ್ರಜ್ಞಾನಗಳು ತೈಲ ಸೋರಿಕೆ ನಿವಾರಣೆಗೆ ಕ್ರಮಗಳು:
1️⃣ ನಾನೊಟೆಕ್ನಾಲಜಿ ಆಧಾರಿತ ಶೋಧನೆ
2️⃣ ಮ್ಯಾಗ್ನೆಟಿಕ್ ಸ್ಪಾಂಜ್ (Magnetic Sponge)
3️⃣ ಬಯೋ-ರಿಮಿಡಿಯೇಷನ್ ತಂತ್ರಜ್ಞಾನ
4️⃣ ಡ್ರೋನ್ ಮತ್ತು ರೋಬೋಟಿಕ್ ಉಪಕರಣಗಳು
5️⃣ ತೈಲ ಸೋರಿಕೆ ನಿರ್ವಹಣೆಗೆ ಕೃತಕ ಬುದ್ಧಿಮತ್ತೆ (AI) ಬಳಕೆ
Take Quiz
Loading...