Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ರವಿಶಂಕರ್ ಛಬ್ಬಿ: CRPF ನೂತನ ಡಿಐಜಿ (DIG) ಆಗಿ ನೇಮಕ
Authored by:
Akshata Halli
Date:
21 ಜನವರಿ 2026
➤ ಕೇಂದ್ರ ಗೃಹ ಸಚಿವಾಲಯವು 2007ರ ಬ್ಯಾಚ್ನ ಉತ್ತರ ಪ್ರದೇಶ ಕೆಡರ್ನ ಐಪಿಎಸ್ ಅಧಿಕಾರಿ ರವಿಶಂಕರ್ ಛಬ್ಬಿ ಅವರನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಉಪ ಮಹಾನಿರೀಕ್ಷಕರಾಗಿ (DIG) ನೇಮಕ ಮಾಡಿದೆ.
ಇವರು ಕೇಂದ್ರ ನಿಯೋಜನೆ (Central Deputation) ಅಡಿಯಲ್ಲಿ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಜನವರಿ 19, 2026
ರಂದು ಕೇಂದ್ರ ಗೃಹ ಸಚಿವಾಲಯವು ಈ ನೇಮಕಾತಿಗೆ ಅನುಮೋದನೆ ನೀಡಿದೆ.
➤ ರವಿಶಂಕರ್ ಛಬ್ಬಿ
ಅವರು ಈ ಹಿಂದೆ ಮಹಿಳಾ ಪವರ್ಲೈನ್-1090 ರ ಮುಖ್ಯಸ್ಥರಾಗಿ, ಜೌನ್ಪುರದ ಎಸ್ಪಿಯಾಗಿ ಮತ್ತು ಕಾರಾಗೃಹ ಸುಧಾರಣಾ ವಿಭಾಗದ ಡಿಐಜಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.ಇವರು ಉತ್ತರ ಪ್ರದೇಶದ ಲಕ್ನೋದ ಡಿಜಿಪಿ ಪ್ರಧಾನ ಕಚೇರಿಯಲ್ಲಿ ಡಿಐಜಿ (ಸಾರ್ವಜನಿಕ ಕುಂದುಕೊರತೆ) ಆಗಿ ಕಾರ್ಯನಿರ್ವಹಿಸುತ್ತಿದ್ದರು.
➤ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF):
CRPF ಭಾರತದ ಅತಿದೊಡ್ಡ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯಾಗಿದೆ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿರುವ CRPF ಅನ್ನು 1939 ರಲ್ಲಿ 'ಕ್ರೌನ್ ರೆಪ್ರೆಸೆಂಟೇಟಿವ್ ಪೊಲೀಸ್' ಆಗಿ ಸ್ಥಾಪಿಸಲಾಯಿತು ಮತ್ತು 1949 ರ ಡಿಸೆಂಬರ್ 28 ರಂದು 'ಕೇಂದ್ರೀಯ ಮೀಸಲು ಪೊಲೀಸ್ ಪಡೆ' (CRPF) ಎಂದು ಮರುನಾಮಕರಣ ಮಾಡಲಾಯಿತು
➤
CRPF ನ ಪ್ರಮುಖ ಕಾರ್ಯಗಳು:-
- ಆಂತರಿಕ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು.
- ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ (Left Wing Extremism).
- ಚುನಾವಣೆಗಳ ಸಂದರ್ಭದಲ್ಲಿ ಭದ್ರತೆ ಒದಗಿಸುವುದು.
- ವಿವಿಐಪಿಗಳ ರಕ್ಷಣೆ ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ರಕ್ಷಣಾ ಕಾರ್ಯ.
➤
ಪ್ರತಿ ವರ್ಷ
ಅಕ್ಟೋಬರ್ 21
ರಂದು 1959ರಲ್ಲಿ ಲಡಾಖ್ನಲ್ಲಿ ಚೀನಾ ಸೈನಿಕರ ವಿರುದ್ಧ ಹೋರಾಡಿ ಹುತಾತ್ಮರಾದ CRPF ಯೋಧರ ನೆನಪಿಗಾಗಿ 'ಪೊಲೀಸ್ ಸಂಸ್ಮರಣಾ ದಿನ'ವನ್ನು ಆಚರಿಸಲಾಗುತ್ತದೆ.
Take Quiz
Loading...