Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ನವಮಂಗಳೂರು ಬಂದರಿಗೆ ರಷ್ಯಾ-ಅಮೆರಿಕದ ತೈಲ ಹಡಗುಗಳ ಆಗಮನ
Authored by:
Akshata Halli
Date:
23 ಮಾರ್ಚ್ 2026
➤
ಮಂಗಳೂರು:
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಸಂಘರ್ಷದ ನಡುವೆಯೂ ಭಾರತದ ಇಂಧನ ಭದ್ರತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಷ್ಯಾ ಮತ್ತು ಅಮೆರಿಕದಿಂದ ಕಚ್ಚಾ ತೈಲ ಹಾಗೂ ಎಲ್ಪಿಜಿ ಹೊತ್ತ ಬೃಹತ್ ಹಡಗುಗಳು ನವಮಂಗಳೂರು ಬಂದರಿಗೆ (NMP) ಯಶಸ್ವಿಯಾಗಿ ತಲುಪಿವೆ.
➤
ಮಂಗಳೂರಿಗೆ ತಲುಪಿದ ಹಡಗುಗಳ ವಿವರ:
1. ಅಕ್ಷಾ ಟೈಟಾನ್ (Aqua Titan):
ರಷ್ಯಾದಿಂದ 96,000 ಮೆಟ್ರಿಕ್ ಟನ್ ಉರಾಲ್ ಕಚ್ಚಾ ತೈಲ ಹೊತ್ತು ಶನಿವಾರ ರಾತ್ರಿ ಬಂದರು ತಲುಪಿದೆ.
2. ಪೈಕ್ಸಿಸ್ ಪಯೋನಿಯರ್ (Pyxis Pioneer):
ಅಮೆರಿಕದ ಟೆಕ್ಸಾಸ್ನಿಂದ ಬಂದಿರುವ ಈ ಹಡಗು 16,714 ಮೆಟ್ರಿಕ್ ಟನ್ ಎಲ್ಪಿಜಿ (LPG) ತಂದಿದೆ.
ಪ್ರಸ್ತುತ ತೇಲುವ ಜೆಟ್ಟಿಗಳ ಮೂಲಕ ತೈಲ ಇಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ಒಂದು ವಾರದಲ್ಲಿ ಸುಮಾರು
72 ಸಾವಿರ ಟನ್ ಎಲ್ಪಿಜಿ
ಹೊತ್ತ ಇನ್ನಷ್ಟು ಹಡಗುಗಳು ಮಂಗಳೂರಿಗೆ ಬರುವ ನಿರೀಕ್ಷೆಯಿದೆ.
➤
ಪರ್ಯಾಯ ಮಾರ್ಗಗಳತ್ತ ಭಾರತದ ಚಿತ್ತ:
ಈ ಹಿಂದೆ ಭಾರತಕ್ಕೆ ಬೇಕಾದ ಶೇ. 50ರಷ್ಟು ಎಲ್ಎನ್ಜಿ ಮತ್ತು ಎಲ್ಪಿಜಿ ಪೂರೈಕೆಯು
ಹೊರ್ಮುಜ್ ಜಲಸಂಧಿ (Strait of Hormuz)
ಮೂಲಕ ನಡೆಯುತ್ತಿತ್ತು. ಆದರೆ ಸಂಘರ್ಷದ ಕಾರಣ ಈ ಮಾರ್ಗದಲ್ಲಿ ಅಪಾಯ ಹೆಚ್ಚಾಗಿರುವುದರಿಂದ, ಭಾರತವು ತನ್ನ ತೈಲ ಆಮದನ್ನು ರಷ್ಯಾದತ್ತ ತಿರುಗಿಸಿದೆ.
- ರಷ್ಯಾದಿಂದ ಒಟ್ಟು 7 ತೈಲ ಹಡಗುಗಳು ಭಾರತದತ್ತ ಮುಖ ಮಾಡಿವೆ.
- ಇವುಗಳಲ್ಲಿ ಒಟ್ಟು 30 ಮಿಲಿಯನ್ ಬ್ಯಾರೆಲ್ ತೈಲವಿದ್ದು, ದೇಶದ ತೈಲ ಸಂಗ್ರಹಕ್ಕೆ ದೊಡ್ಡ ಬಲ ನೀಡಲಿವೆ.
- ರಷ್ಯಾದ 'ಸುಯೆಜ್ ಮ್ಯಾಕ್ಸ್ ಝಝ' ಹಡಗು ಮಾರ್ಚ್ 25 ರಂದು ಗುಜರಾತಿನ ಸಿಕ್ಕಾ ಬಂದರು ತಲುಪಲಿದೆ.
➤
ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ:
ಮಧ್ಯಪ್ರಾಚ್ಯದ ಸಂಘರ್ಷದಿಂದ ಉಂಟಾಗಿರುವ ಜಾಗತಿಕ ಇಂಧನ ಬಿಕ್ಕಟ್ಟನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾನುವಾರ (ಮಾರ್ಚ್ 22, 2026) ಉನ್ನತ ಮಟ್ಟದ ತುರ್ತು ಸಭೆ ನಡೆಯಿತು. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಭಾಗವಹಿಸಿ, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ವಿದ್ಯುತ್ ಹಾಗೂ ರಸಗೊಬ್ಬರ ವಲಯಗಳ ಮೇಲೆ ಯುದ್ಧದ ಪರಿಣಾಮಗಳನ್ನು ಕೂಲಂಕಷವಾಗಿ ಅವಲೋಕಿಸಿದರು. ದೇಶಾದ್ಯಂತ ಅಗತ್ಯ ಸಂಪನ್ಮೂಲಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸ್ಥಿರವಾದ ಪೂರೈಕೆ ಜಾಲ ಮತ್ತು ಸಮರ್ಥ ವಿತರಣಾ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
Take Quiz
Loading...