* ರಷ್ಯಾ ವಿಜ್ಞಾನಿಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ವಿಶ್ವದ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ.* ಎಂಆರ್ಎನ್ಎ ಆಧರಿತ ಈ ವ್ಯಾಕ್ಸಿನ್ ಪೂರ್ವ ಕ್ಲಿನಿಕಲ್ ಟ್ರಯಲ್ನಲ್ಲಿ ಶೇಕಡಾ 100ರಷ್ಟು ಪರಿಣಾಮಕಾರಿ ಮತ್ತು ಸುರಕ್ಷಿತವಾಗಿದೆ. ಆದರೆ, ಇದನ್ನು ಬಳಕೆ ಮಾಡಲು ಇನ್ನೂ ರಷ್ಯಾ ಸರ್ಕಾರದ ಅಂತಿಮ ಅನುಮತಿ ಬೇಕಾಗಿದೆ.* ಎಂಟರೋಮಿಕ್ಸ್ (Enteromix) ಎಂದು ಕರೆಯುವ ಈ ಲಸಿಕೆ ಕ್ಯಾನ್ಸರ್ ಟ್ಯೂಮರ್ಗಳನ್ನು ನಾಶಮಾಡಿ, ಅವುಗಳ ಗಾತ್ರವನ್ನು ಕಡಿಮೆ ಮಾಡಲು ಯಶಸ್ವಿಯಾಗಿದೆ ಎಂದು ಫೆಡರಲ್ ಮೆಡಿಕಲ್ ಆ್ಯಂಡ್ ಬಯೋಲಾಜಿಕಲ್ ಏಜೆನ್ಸಿ (FMBA) ತಿಳಿಸಿದೆ.* ಎಂಆರ್ಎನ್ಎ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಿದ ಈ ಲಸಿಕೆ ದೇಹದ ಜೀವಕೋಶಗಳಿಗೆ ಕ್ಯಾನ್ಸರ್ ಕೋಶಗಳ ವಿರುದ್ಧ ಪ್ರತಿರೋಧಕ ಶಕ್ತಿ ಬೆಳೆಯುವ ಪ್ರೋಟೀನ್ ಉತ್ಪಾದನೆಗೆ ಉತ್ತೇಜನ ನೀಡುತ್ತದೆ.