* ಮೂರು ವರ್ಷಗಳ ಯುದ್ಧವನ್ನು ಅಂತ್ಯಗೊಳಿಸಲು ರಷ್ಯಾ ಮತ್ತು ಉಕ್ರೇನ್ ನಿಯೋಗಗಳು ಜೂನ್ 2 ರಂದು ಟರ್ಕಿಯ ಇಸ್ತಾಂಬೂಲ್ನಲ್ಲಿ ಎರಡನೇ ಸುತ್ತಿನ ಶಾಂತಿ ಮಾತುಕತೆ ನಡೆಸಿವೆ.* ಉಕ್ರೇನ್ ನಿಯೋಗದ ನೇತೃತ್ವವನ್ನು ರಕ್ಷಣಾ ಸಚಿವ ರುಸ್ಟಮ್ ಉಮೆರೊವ್ ವಹಿಸಿದ್ದರು, ರಷ್ಯಾ ನಿಯೋಗವನ್ನು ಅಧ್ಯಕ್ಷ ಪುಟಿನ್ ಅವರ ಸಹಾಯಕ ವ್ಲಾಡಿಮಿರ್ ಮೆಡಿನ್ಸ್ಕಿ ಮುನ್ನಡೆಸಿದರು.* ಟರ್ಕಿಶ್ ವಿದೇಶಾಂಗ ಸಚಿವ ಹಕನ್ ಫಿಡಾನ್ ಮಾತುಕತೆಯ ಅಧ್ಯಕ್ಷತೆಯನ್ನು ವಹಿಸಿದ್ದರು.* ಉಕ್ರೇನ್ ಪಡೆಗಳು ಸೈಬೀರಿಯಾದ ರಷ್ಯಾ ಸೇನಾನೆಲೆಗೆ ಡ್ರೋನ್ ದಾಳಿ ನಡೆಸಿದ್ದು, 40ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ನಾಶಪಡಿಸಿದ್ದಾಗಿ ವರದಿಯಾಗಿದೆ.* ಈ ದಾಳಿಗೆ ‘ಆಪರೇಷನ್ ಸೈಡರ್ವೆಬ್’ ಎಂದು ಹೆಸರು ನೀಡಲಾಗಿದೆ. ಗಡಿಯಿಂದ ಸಾವಿರಾರು ಕಿ.ಮೀ. ದೂರದ ವಾಯುನೆಲೆಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲು ಕಳೆದ ಒಂದೂವರೆ ವರ್ಷದಿಂದ ಸಿದ್ಧತೆ ನಡೆದಿತ್ತು. ಅಧ್ಯಕ್ಷ ಝಲೆನ್ ಸ್ವತಃ ಈ ಕಾರ್ಯಾಚರಣೆಯ ಮೇಲ್ವಿಚಾರಣೆಯಲ್ಲಿ ತೊಡಗಿಸಿಕೊಂಡಿದ್ದರು.