* ಗುರುವಾರ(ಜುಲೈ 03) ರಷ್ಯಾ ಇಸ್ಲಾಮಿಕ್ ಎಮಿರೇಟ್ ಎಂಬ ತಾಲಿಬಾನ್ ಆಡಳಿತವನ್ನು ಅಧಿಕೃತವಾಗಿ ಗುರುತಿಸಿದ ಮೊದಲ ರಾಷ್ಟ್ರವಾಗಿದೆ ಎಂದು ಅಫ್ಘಾನಿಸ್ತಾನ ಪ್ರಕಟಿಸಿದೆ.* ಕಾಬೂಲ್ನಲ್ಲಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತಾಕಿ ಮತ್ತು ರಷ್ಯಾದ ರಾಯಭಾರಿ ಡಿಮಿಟ್ರಿ ಝಿರ್ನೋವ್ ನಡುವಿನ ಸಭೆಯ ಬಳಿಕ ಈ ಘೋಷಣೆ ಹೊರಬಂದಿತು.* ಮುತಾಕಿ ಈ ನಿರ್ಧಾರವನ್ನು "ಕೆಚ್ಚೆದೆಯಾದ ಮತ್ತು ಧೈರ್ಯಶಾಲಿ ಹೆಜ್ಜೆ" ಎಂದು ವರ್ಣಿಸಿದರು ಹಾಗೂ ಇತರ ರಾಷ್ಟ್ರಗಳಿಗೆ ಇದು ಮಾದರಿಯಾಗಲಿದೆ ಎಂದು ಹೇಳಿದರು.* ತಾಲಿಬಾನ್ ವಿದೇಶಾಂಗ ಇಲಾಖೆ ವಕ್ತಾರ ಟಕಲ್, ರಷ್ಯಾ ಅವರ ಆಡಳಿತವನ್ನು ಅಧಿಕೃತವಾಗಿ ಗುರುತಿಸಿದಂತೆಯೇ ಎಂದು ಸ್ಪಷ್ಟಪಡಿಸಿದರು. ಇದನ್ನು ರಷ್ಯಾದ ಮಾಸ್ಕೋ ಪ್ರತಿನಿಧಿ ಕಬುಲೋವ್ ಮತ್ತು ವಿದೇಶಾಂಗ ಇಲಾಖೆ ಸಹ ದೃಢಪಡಿಸಿದ್ದಾರೆ.*ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಕೆಲವು ರಾಷ್ಟ್ರಗಳು ತಾಲಿಬಾನ್ ರಾಯಭಾರಿಗಳನ್ನು ತಾವು ಹೊಂದಿದ್ದರೂ, ಇಸ್ಲಾಮಿಕ್ ಎಮಿರೇಟ್ ಅನ್ನು ಇನ್ನೂ ಅಧಿಕೃತವಾಗಿ ಗುರುತಿಸಿಲ್ಲ.