* ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಜುಲೈ 8 ರಂದು ರಷ್ಯಾ ರಾಜಧಾನಿ ಮಸ್ಕೊಗೆ ತೆರಳಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಸೇನಾ ಆಕ್ರಮಣದ ನಂತರ ಇದೇ ಮೊದಲ ಬಾರಿಗೆ ರಷ್ಯಾಗೆ ಭೇಟಿ ನೀಡಿದ್ದಾರೆ.* ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಜೊತೆಗೆ ಇಂಧನ, ವ್ಯಾಪಾರ, ರಕ್ಷಣಾ ಕ್ಷೇತ್ರಗಳ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ.* 2019 ರ ಬಳಿಕ ಮೋದಿ ಅವರು ಮೊದಲ ಬಾರಿಗೆ ರಷ್ಯಾಗೆ ಭೇಟಿ ನೀಡಿದ್ದು, ಜುಲೈ 8 ರಂದು ಮಾಸ್ಕೊದಲ್ಲಿ 22ನೇ ಭಾರತ- ರಷ್ಯಾ ಶೃಂಗಸಭೆ ನಡಿಯಲಿದೆ.* ಎರಡು ದೇಶಗಳ  ನಡುವಿನ ಪಾಲುಗಾರಿಕೆಯನ್ನು ಮುಂದುವರೆಸಲು ಮೋದಿ ಅವರು ಪುಟಿನ್ ಜೊತೆಗೆ ಮಹತ್ವದ ಚರ್ಚೆ ಮಾಡಲಿದ್ದಾರೆ. ಮೋದಿ ಅವರು ರಷ್ಯಾದಲ್ಲಿರುವ ಭಾರತೀಯರ ಜೊತೆಗೂ ಸಂವಾದ ನಡೆಸಲಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರ ರಣ್ ಧೀರ್ ಜೈಸ್ವಾಲ್ ಅವರು ತಿಳಿಸಿದ್ದಾರೆ.* ಶಾಂತಿಯುತ ಹಾಗೂ ಪ್ರದೇಶವಾರು ಸ್ಥಿರತೆಯ ವಿಷಯದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲು ಬಯಸುತ್ತದೆ ಎಂದು ಮೋದಿ ಹೇಳಿಕೆ ನೀಡಿದ್ದರು.* ಶೃಂಗಸಭೆಯ ಬಳಿಕ ಜುಲೈ 9 ರಂದು ಮೋದಿ ಅವರು ಆಸ್ಟ್ರಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 40 ವರ್ಷದ ಬಳಿಕ ಭಾರತ ಪ್ರಧಾನಿ ಮೋದಿ ಅವರು  ಆಸ್ಟ್ರಿಯಾಕ್ಕೆ ಭೇಟಿ ನೀಡಲಿದ್ದಾರೆ.