* ದೆಹಲಿಯ ಜನಪಥ್ನ ಡಾ. ಅಂಬೇಡ್ಕರ್ ಸಭಾಭವನದಲ್ಲಿ ಬುಧವಾರ ನಡೆದ ಆರ್ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ 100 ರೂ. ವಿಶೇಷ ನಾಣ್ಯ ಮತ್ತು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು.* ಈ ಸಂದರ್ಭದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಆರ್ಎಸ್ಎಸ್ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಜರಿದ್ದರು.* 100 ರೂ. ಮುಖಬೆಲೆಯ ಈ ನಾಣ್ಯದಲ್ಲಿ ಒಂದು ಬದಿಯಲ್ಲಿ ಸಿಂಹ ಮುದ್ರೆ, "ಭಾರತ-ಇಂಡಿಯಾ" ಎಂಬ ಅಕ್ಷರಗಳು ಹಾಗೂ ಮೌಲ್ಯ ಚಿಹ್ನೆ ಇವೆ.* ಇನ್ನೊಂದು ಬದಿಯಲ್ಲಿ ಸಿಂಹದ ಮೇಲೆ ಆಸೀನರಾದ ಭಾರತ ಮಾತೆಯ ಚಿತ್ರ, ಜೊತೆಗೆ ಭಕ್ತಿಯಿಂದ ನಮಸ್ಕರಿಸುತ್ತಿರುವ ಮೂವರು ಸ್ವಯಂಸೇವಕರ ಚಿತ್ರ ಅಚ್ಚಲಾಗಿದೆ.* ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಅಚ್ಚು ಹಾಕಿದ ನಾಣ್ಯದಲ್ಲಿ ಭಾರತ ಮಾತೆಯ ಚಿತ್ರ ಅಚ್ಚಲಾಗಿದೆ.* ನಾಣ್ಯದ ಮೇಲೆ ಆರ್ಎಸ್ಎಸ್ ಧ್ಯೇಯವಾಕ್ಯ “ರಾಷ್ಟ್ರಾಯ ಸ್ವಾಹಾ, ಇದಂ ರಾಷ್ಟ್ರಾಯ, ಇದಂ ನ ಮಮ” ಅಚ್ಚು ಹಾಕಲಾಗಿದೆ. ಇದರ ಅರ್ಥ- ನನ್ನದಾದ ಎಲ್ಲವನ್ನೂ ರಾಷ್ಟ್ರಕ್ಕೆ ಸಮರ್ಪಿಸುತ್ತೇನೆ; ಎಲ್ಲವೂ ರಾಷ್ಟ್ರದ್ದೇ, ನನ್ನದು ಎಂಬುದೇನೂ ಇಲ್ಲ ಎಂಬುದಾಗಿದೆ.