* ಜರ್ಮನಿಯ ಲಿಂಡೌನಲ್ಲಿ ಆರಂಭವಾದ 74ನೇ ಲಿಂಡೌ ಸಮ್ಮೇಳನದಲ್ಲಿ ಗಂಗಾವತಿಯ ಯುವ ವಿಜ್ಞಾನಿ ನಸೀಮ್ ಕೌಸರ್ ಭಾಗವಹಿಸುತ್ತಿದ್ದಾರೆ. ಈ ಸಮ್ಮೇಳನ ಜುಲೈ 4ರವರೆಗೆ ನಡೆಯಲಿದೆ.* ನಸೀಮ್ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ. ಅವರು ಗಂಗಾವತಿಯ ಉರ್ದು ಹೈಸ್ಕೂಲಿನ ಮುಖ್ಯೋಪಾಧ್ಯಾಯ ಎಂ.ಬಿ. ಕೊಪ್ಪಳ ಹಾಗೂ ಸೂಫಿಯಾ ಬೇಗಂ ದಂಪತಿಯ ಪುತ್ರಿ.* ಈ ಜಾಗತಿಕ ಸಮ್ಮೇಳನದಲ್ಲಿ ನೊಬೆಲ್ ವಿಜೇತರೊಂದಿಗೆ 600 ಯುವ ವಿಜ್ಞಾನಿಗಳು ಚರ್ಚೆ ನಡೆಸುತ್ತಾರೆ. ಭಾರತದಿಂದ 29 ಮಂದಿ ವಿಜ್ಞಾನಿಗಳು ಆಯ್ಕೆಯಾಗಿದ್ದು, ಅವರ ಎಲ್ಲಾ ಖರ್ಚುಗಳನ್ನು ಡಿಎಸ್ಟಿ ಇಲಾಖೆ ಭರಿಸುತ್ತಿದೆ.* ಈ ಆಯ್ಕೆ ಸಂತಸದ ವಿಷಯವಾಗಿದ್ದು, “ಇದು ಮಗಳ ಸಾಧನೆಗೆ ಹೊಸ ಪ್ರೇರಣೆ” ಎಂದು ನಸೀಮ್ ತಂದೆ ಎಂ.ಬಿ. ಕೊಪ್ಪಳ ತಿಳಿಸಿದ್ದಾರೆ.