* ಭಾರತ ಮತ್ತು ನೇಪಾಳ ನಡುವೆ ₹390 ಮಿಲಿಯನ್ ಮೊತ್ತದ ಅನುದಾನದ ಅಡಿಯಲ್ಲಿ ಐದು "ಹೆಚ್ಚಿನ ಪರಿಣಾಮ ಬೀರುವ" ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಒಪ್ಪಂದಕ್ಕೆ ಸಹಿ ಹಾಕಲಾಗಿದೆ.* ಈ ಯೋಜನೆಗಳು ನೇಪಾಳದ ಮಾಧೇಶ್, ಸುದುರ್ಪಾಶ್ಚಿಮ್ ಮತ್ತು ಗಂಡಕಿ ಪ್ರದೇಶಗಳಲ್ಲಿ ಶಾಲಾ ಕಟ್ಟಡಗಳು ಮತ್ತು ಆಸ್ಪತ್ರೆಗಳ ನಿರ್ಮಾಣವನ್ನು ಒಳಗೊಂಡಿವೆ.* ಈ ಸೌಲಭ್ಯಗಳು ನೇಪಾಳದ ಜನತೆಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತವೆ.* ಭಾರತ ಮತ್ತು ನೇಪಾಳ ನಡುವಿನ ಸಹಕಾರವು ನೆರೆಹೊರೆಯ ರಾಷ್ಟ್ರಗಳ ನಡುವೆ ಇರುವ ಗಾಢ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಭಾರತ ಸರ್ಕಾರ, ನೇಪಾಳದ ಆಧಾರಭುತ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಿರಂತರ ಬೆಂಬಲ ನೀಡುತ್ತಿದೆ.