* ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ₹36,000 ಕೋಟಿ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದರು.* ಹೊಸದಾಗಿ ನಿರ್ಮಿತ ವಿಮಾನ ನಿಲ್ದಾಣ ಟರ್ಮಿನಲ್ ಹಾಗೂ ರಾಷ್ಟ್ರೀಯ ಮಖಾನಾ ಮಂಡಳಿಯನ್ನು ಉದ್ಘಾಟಿಸಿದರು. ದೇಶದ ಮಖಾನಾ ಉತ್ಪಾದನೆಯಲ್ಲಿ ಬಿಹಾರವು ಶೇ.90 ಪಾಲು ಹೊಂದಿದೆ.* ₹2,680 ಕೋಟಿ ಮೊತ್ತದ ಕೋಸಿ-ಮೆಚಿ ನದಿ ಸಂಪರ್ಕ ಯೋಜನೆಯ 1ನೇ ಹಂತ ಮತ್ತು ಭಾಗಲ್ಪುರದಲ್ಲಿ 3x800 ಮೆಗಾವ್ಯಾಟ್ ವಿದ್ಯುತ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.* ಈ ಯೋಜನೆ ಬಿಹಾರದಲ್ಲಿ ಖಾಸಗಿ ವಲಯದ ಅತಿದೊಡ್ಡ ಹೂಡಿಕೆ (₹25,000 ಕೋಟಿ) ಆಗಲಿದೆ.* ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಅತ್ಯಾಧುನಿಕ ವೀರ್ಯ ಕೇಂದ್ರವನ್ನು ಉದ್ಘಾಟಿಸಿದರು. ಇದು ವರ್ಷಕ್ಕೆ 5 ಲಕ್ಷ ವೀರ್ಯ ಡೋಸ್ ಉತ್ಪಾದಿಸಲು ಸಾಮರ್ಥ್ಯ ಹೊಂದಿದೆ.* ಬಿಹಾರದಲ್ಲಿ ಹಲವು ರೈಲು ಯೋಜನೆಗಳಿಗೆ ಚಾಲನೆ ನೀಡಲಾಯಿತು. ಗಂಗಾ ನದಿಗೆ ಅಡ್ಡಲಾಗಿ ₹2,170 ಕೋಟಿ ವೆಚ್ಚದ ಬಿಕ್ರಮಶಿಲಾ-ಕಟಾರಿಯಾ ರೈಲು ಮಾರ್ಗ ಹಾಗೂ ₹4,410 ಕೋಟಿ ಮೊತ್ತದ ಅರಾರಿಯಾ–ಗಲ್ಗಾಲಿಯಾ ಹೊಸ ರೈಲು ಮಾರ್ಗವನ್ನು ಪ್ರಾರಂಭಿಸಿದರು.* ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 40,920 ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಿದರು.* ಜೊತೆಗೆ ದೀನದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಕ್ಲಸ್ಟರ್ಗಳಿಗೆ ₹500 ಕೋಟಿ ನಿಧಿಯನ್ನು ವಿತರಿಸಿದರು.