* ಕೇಂದ್ರ ಸರ್ಕಾರವು ನಾಗರಿಕ ಬಳಕೆದಾರರು ಮತ್ತು ಭದ್ರತಾ ಪಡೆಗಳಿಗೆ ಡ್ರೋನ್ ಉತ್ಪಾದನೆ ಹೆಚ್ಚಿಸಲು 234 ಮಿಲಿಯನ್ ಡಾಲರ್ (ಅಂದಾಜು ₹2 ಸಾವಿರ ಕೋಟಿ) ಮೊತ್ತದ ಪ್ರೋತ್ಸಾಹಕ ಯೋಜನೆಯನ್ನು ಘೋಷಿಸಲು ತಯಾರಿ ನಡೆಸುತ್ತಿದೆ ಎಂದು ‘ರಾಯಿಟರ್ಸ್’ ವರದಿ ಮಾಡಿದೆ.*ಚೀನಾ ದಾಳಿ ಬಳಿಕ ದೇಶೀಯ ಡ್ರೋನ್ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಡ್ರೋನ್ಗಳಿಗೆ ಬೇಕಾದ ಭಾಗಗಳನ್ನು ಸ್ಥಳೀಯವಾಗಿ ತಯಾರಿಸುವ ಯೋಜನೆಯೂ ಇದೆ. ಇದರ ಮೂಲಕ ಆತ್ಮನಿರ್ಭರ ಭಾರತವನ್ನು ಸಾಧಿಸುವ ಉದ್ದೇಶ ಹೊಂದಲಾಗಿದೆ.* ಈ ಯೋಜನೆಯು ಡ್ರೋನ್, ಡ್ರೋನ್ ಸಾಫ್ಟ್ವೇರ್, ಕೌಂಟರ್ ಡ್ರೋನ್ ಸಿಸ್ಟಂಗಳು ಮತ್ತು ಸಂಬಂಧಿತ ಸೇವೆಗಳ ತಯಾರಿಕೆಯನ್ನು ಒಳಗೊಂಡಿದೆ. ಯೋಜನೆಗೆ ನಾಗರಿಕ ವಿಮಾನಯಾನ ಮತ್ತು ರಕ್ಷಣಾ ಸಚಿವಾಲಯ ನೇತೃತ್ವ ವಹಿಸುತ್ತಿದೆ.* 2028ರ ಆರ್ಥಿಕ ವರ್ಷದ ವೇಳೆಗೆ ದೇಶೀಯ ಉತ್ಪಾದನೆಯ ಶೇ.40ರಷ್ಟು ಭಾಗ ದೇಶದಲ್ಲಿಯೇ ತಯಾರಿಸುವ ಗುರಿ ಇದೆ. * ಡ್ರೋನ್ ಆಮದು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.