* ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಶೇ.50ರಷ್ಟು ತೆರಿಗೆಯಿಂದ ಸಂಕಷ್ಟಕ್ಕೀಡಾದ ಭಾರತೀಯ ರಫ್ತುದಾರರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಪರ್ಯಾಯ ಕ್ರಮಗಳನ್ನು ರೂಪಿಸುತ್ತಿದೆ.* ಸರ್ಕಾರದ ಮೂಲಗಳ ಪ್ರಕಾರ, ರಫ್ತುದಾರರ ಸಮಸ್ಯೆಗಳನ್ನು ಗುರುತಿಸಿ, ಅವರಿಗೆ ಸಹಾಯ ಮಾಡಲು ಕ್ರಮಗಳನ್ನು ಕೈಗೊಳ್ಳುವ ಕಾರ್ಯ ಆರಂಭವಾಗಿದೆ.* ಅಮೆರಿಕ ಹೊರತುಪಡಿಸಿ ಇತರೆ ದೇಶಗಳಿಗೆ ರಫ್ತು ವಿಸ್ತರಿಸುವುದು, ಹೊಸ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಅನುಷ್ಠಾನಗೊಳಿಸುವುದು, ರಫ್ತುದಾರರಿಗೆ ವಿವಿಧ ರೀತಿಯ ಬೆಂಬಲ ನೀಡುವುದು ಮತ್ತು ದೇಶೀಯ ಮಾರುಕಟ್ಟೆಗಳ ಬೆಳವಣಿಗೆಗೆ ಒತ್ತು ನೀಡುವ ಕುರಿತು ಚಿಂತನೆ ನಡೆಯುತ್ತಿದೆ.* ಇದೇ ರೀತಿ, ತೆರಿಗೆ ಹೊಡೆತಕ್ಕೊಳಗಾದ ವಲಯಗಳ ರಫ್ತುದಾರರಿಗೆ ತುರ್ತು ಸಾಲ ಸಿಗಲು ಸರ್ಕಾರವೇ ಖಾತರಿ ನೀಡುವುದು, ರಫ್ತು ಸಾಲದ ಮರುಪಾವತಿಗೆ ಸಮಯಾವಕಾಶ ಕಲ್ಪಿಸುವುದು, ರಫ್ತು ಮಾಡಿದ ವಸ್ತುಗಳಿಗೆ ಹಣ ಸ್ವೀಕೃತಿ ವಿಳಂಬವಾದಲ್ಲಿ ನೆರವು ನೀಡುವಂತಹ ಕ್ರಮಗಳನ್ನು ಕೂಡ ಸರ್ಕಾರ ಪರಿಶೀಲಿಸುತ್ತಿದೆ.