* ಫ್ರಾನ್ಸ್ನ ಡಾಸೊ ಏವಿಯೇಷನ್ ಹಾಗೂ ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ರಫೇಲ್ ಯುದ್ಧ ವಿಮಾನಗಳ ದೇಹದ ಮುಖ್ಯ ಭಾಗಗಳನ್ನು ಭಾರತದಲ್ಲೇ ತಯಾರಿಸಲು ಒಪ್ಪಂದ ಮಾಡಿಕೊಂಡಿವೆ.* ಈ ಒಪ್ಪಂದದ ಭಾಗವಾಗಿ, ಟಾಟಾ ಸಂಸ್ಥೆ ಹೈದರಾಬಾದ್ನಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕವೊಂದನ್ನು ಸ್ಥಾಪಿಸಲಿದೆ. ಇಲ್ಲಿ ರಫೇಲ್ ಯುದ್ಧ ವಿಮಾನದ ಪ್ರಮುಖ ಭಾಗಗಳು ತಯಾರಾಗಲಿವೆ.* ಈ ಘಟಕದಲ್ಲಿ ಮೊದಲ ಭಾಗಗಳು 2028ನೇ ಆರ್ಥಿಕ ವರ್ಷದಲ್ಲಿ ತಯಾರಾಗುವ ನಿರೀಕ್ಷೆಯಿದೆ.* ಪ್ರತಿ ತಿಂಗಳು ಎರಡು ಯುದ್ಧ ವಿಮಾನಗಳ ಚೌಕಟ್ಟುಗಳು ಇಲ್ಲಿ ತಯಾರಾಗಲಿವೆ. ಫ್ರಾನ್ಸ್ನ ಹೊರಗೆ ರಫೇಲ್ ಚೌಕಟ್ಟುಗಳನ್ನು ತಯಾರಿಸುವುದು ಇದು ಮೊಟ್ಟ ಮೊದಲ ಬಾರಿಗೆ ನಡೆಯಲಿದೆ.* ಡಾಸೊ ಕಂಪನಿಯು ಇದನ್ನು “ಭಾರತದ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸುವ ನಿರ್ಣಾಯಕ ಹೆಜ್ಜೆ” ಎಂದು ಹೇಳಿದೆ.