* ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೋಮನ್ ಕ್ಯಾಥೋಲಿಕ್ ಚರ್ಚ್ನ ಮುಖ್ಯಸ್ಥ , ಕ್ರೈಸ್ತ ಧರ್ಮದ ಪರಮೋಚ್ಚ ನಾಯಕ ಪೋಪ್ ಫ್ರಾನ್ಸಿಸ್ ಅವರು ಏಪ್ರಿಲ್ 21, 2025 ರಂದು ನಿಧನರಾಗಿದ್ದಾರೆ.* ಅವರಿಗೆ 88 ವರ್ಷ ವಯಸ್ಸಾಗಿತ್ತು ಮತ್ತು ಇತ್ತೀಚೆಗೆ ಗಂಭೀರವಾದ ನ್ಯುಮೋನಿಯಾದಿಂದ ಬಳಲುತ್ತಿದ್ದರು. ರೋಮನ್ ಕ್ಯಾಥೋಲಿಕರ ನಾಯಕರಾಗಿ ಆಯ್ಕೆಯಾದ ಮೊದಲ ಲ್ಯಾಟಿನ್ ಅಮೇರಿಕನ್ ಕಾರ್ಡಿನಲ್ ಪೋಪ್ ಫ್ರಾನ್ಸಿಸ್ ಆಗಿದ್ದರು. * ವ್ಯಾಟಿಕನ್ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ಸೇಂಟ್ ಪೀಟರ್ಸ್ ಬೆಸಿಲಿಕಾ ಪಕ್ಕದಲ್ಲಿರುವ ವ್ಯಾಟಿಕನ್ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.* ಪೋಪ್ ಫ್ರಾನ್ಸಿಸ್ ಅವರು ಪೋಪ್ ಆಗಿ ಆಯ್ಕೆಯಾದ ಮೊದಲ ಜೆಸ್ಯೂಟ್ ಆಗಿದ್ದರು. ಪೋಪ್ ಫ್ರಾನ್ಸಿಸ್ ಅವರನ್ನು ಸೇಂಟ್ ಮೇರಿ ಮೇಜರ್ ಬೆಸಿಲಿಕಾದಲ್ಲಿ ಸಮಾಧಿ ಮಾಡಲಾಗುವುದು.* ಬೆಸಿಲಿಕಾ ಎಂದರೆ ರೋಮನ್ ಕ್ಯಾಥೋಲಿಕ್ ಚರ್ಚ್, ನಿರ್ದಿಷ್ಟವಾಗಿ ವ್ಯಾಟಿಕನ್ನಿಂದ ವಿಶೇಷ ಮಹತ್ವ ಮತ್ತು ಸವಲತ್ತುಗಳನ್ನು ಪಡೆದ ಚರ್ಚ್.