* ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಆಡಿದ ನೊವಾಕ್ ಜೊಕೊವಿಕ್ ಗ್ರ್ಯಾಂಡ್ ಸ್ಲ್ಯಾಮ್ನಲ್ಲಿ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಸಾರ್ವಕಾಲಿಕ ಗ್ರ್ಯಾಂಡ್ ಸ್ಲಾಮ್ ದಾಖಲೆಯನ್ನು ಮುರಿದಿದ್ದಾರೆ.* ತಮ್ಮ ವೃತ್ತಿಜೀವನದಲ್ಲಿ 430ನೇ ಗ್ರಾಂಡ್ ಸ್ಮ್ಯಾಮ್ ಪಂದ್ಯವಾಡಿದ ಜೊಕೊವಿಕ್, ಗ್ರ್ಯಾಂಡ್ ಸ್ಲಾಮ್ ಟೆನಿಸ್ನಲ್ಲಿ ಅತಿ ಹೆಚ್ಚು ಸಿಂಗಲ್ಸ್ ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. * 2005ರಲ್ಲಿ ಗ್ರ್ಯಾಂಡ್ ಸ್ಲಾಮ್ ವೃತ್ತಿಜೀವನವನ್ನು ಆರಂಭಿಸಿದ ಜೊಕೊವಿಕ್, ಸುದೀರ್ಘ 20 ವರ್ಷ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಆಡುತ್ತಿದ್ದಾರೆ. ಅವರ ಶ್ರೇಷ್ಠ ಪ್ರತಿಸ್ಪರ್ಧಿ ರೋಜರ್ ಫೆಡರರ್ ಅವರನ್ನು ಹಿಂದಿಕ್ಕಿದ್ದಾರೆ. * ತಮ್ಮ ವೃತ್ತಿಜೀವನದಲ್ಲಿ 430ನೇ ಗ್ರಾಂಡ್ ಸ್ಮ್ಯಾಮ್ ಪಂದ್ಯವಾಡಿದ ಜೊಕೊವಿಕ್ ರೋಜರ್ ಫೆಡರರ್ ಅವರ ದಾಖಲೆಯನ್ನು ಮುರಿದಿದ್ದಾರೆ. ರೋಜರ್ ಫೆಡರರ್ 429 ಪಂದ್ಯಗಳಲ್ಲಿ ಆಡಿದ್ದು, ಸೆರೆನಾ ವಿಲಿಯಮ್ಸ್ 423 ಪಂದ್ಯಗಳನ್ನು ಆಡಿದ್ದಾರೆ.* ಪೋರ್ಚುಗಲ್ನ ಜೈಮ್ ಫರಿಯಾ ವಿರುದ್ಧ ನಾಲ್ಕು ಸೆಟ್ಗಳ ಗೆಲುವು ಸಾಧಿಸಿದ ನೊವಾಕ್ ಜೊಕೊವಿಕ್, ಈ ವರ್ಷದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.