Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ರಕ್ಷಣಾ ವಲಯದ FDI ಮಿತಿ ಶೇ. 49 ರಿಂದ ಶೇ. 74ಕ್ಕೆ ಏರಿಕೆ: ದೇಶೀಯ ಉತ್ಪಾದನೆಗೆ ಸಿಗಲಿದೆಯೇ ಹೊಸ ವೇಗ
Authored by:
Akshata Halli
Date:
17 ಜನವರಿ 2026
➤ ಭಾರತ ಸರ್ಕಾರವು ದೇಶೀಯ ರಕ್ಷಣಾ ಉತ್ಪಾದನೆಯನ್ನು ಬಲಪಡಿಸುವ ಹಾಗೂ ಜಾಗತಿಕ ರಕ್ಷಣಾ ಕಂಪನಿಗಳನ್ನು ದೇಶಕ್ಕೆ ಆಕರ್ಷಿಸುವ ಉದ್ದೇಶದಿಂದ
ರಕ್ಷಣಾ ವಲಯದಲ್ಲಿನ ವಿದೇಶಿ ನೇರ ಹೂಡಿಕೆ (FDI) ನಿಯಮಗಳನ್ನು ಮತ್ತಷ್ಟು ಸಡಿಲಿಸುವತ್ತ ಹೆಜ್ಜೆ
ಇಡುತ್ತಿದೆ ಎಂದು ವರದಿಯಾಗಿದೆ. ಈ ಕ್ರಮವು
‘ಮೇಕ್ ಇನ್ ಇಂಡಿಯಾ’,
‘ಆತ್ಮನಿರ್ಭರ ಭಾರತ’ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ
ಸಾಧಿಸುವ ಸರ್ಕಾರದ ದೀರ್ಘಕಾಲೀನ ದೃಷ್ಟಿಕೋನದ ಭಾಗವಾಗಿದೆ.
➤ ಈಗಿರುವ ನಿಯಮದಂತೆ, ಅಸ್ತಿತ್ವದಲ್ಲಿರುವ ರಕ್ಷಣಾ ಪರವಾನಗಿ ಹೊಂದಿರುವ ಕಂಪನಿಗಳಲ್ಲಿ ಶೇ. 49ರಷ್ಟು ಮಾತ್ರ ಸ್ವಯಂಚಾಲಿತ ಮಾರ್ಗದ ಮೂಲಕ ಹೂಡಿಕೆ ಮಾಡಲು ಅವಕಾಶವಿದೆ. ಇದನ್ನು
ಶೇ. 74ಕ್ಕೆ
ಏರಿಸಲು ಸರ್ಕಾರ ನಿರ್ಧರಿಸಿದೆ.
74 ಶೇಕಡಾ ವರೆಗೆ FDIಗೆ ಸ್ವಯಂ ಅನುಮೋದನಾ ಮಾರ್ಗ
ದಲ್ಲಿ ಅವಕಾಶವಿದ್ದು, ಅದಕ್ಕಿಂತ ಹೆಚ್ಚಿನ ಹೂಡಿಕೆಗೆ ಸರ್ಕಾರದ ವಿಶೇಷ ಅನುಮೋದನೆ ಅಗತ್ಯವಿದೆ. ಆದರೆ, ಈ ಮಿತಿಯನ್ನು ಇನ್ನಷ್ಟು ಸಡಿಲಿಸಿ, ನಿರ್ದಿಷ್ಟ ತಂತ್ರಜ್ಞಾನಗಳು, ಉನ್ನತ ಮಟ್ಟದ ರಕ್ಷಣಾ ಉತ್ಪನ್ನಗಳು ಹಾಗೂ ತಂತ್ರಾತ್ಮಕ ಅಗತ್ಯಗಳಿಗೆ ಸಂಬಂಧಿಸಿದ ಯೋಜನೆಗಳಲ್ಲಿ
100 ಶೇಕಡಾ ವರೆಗೆ FDIಗೆ ಸುಲಭ ಅವಕಾಶ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ
ಎನ್ನಲಾಗಿದೆ.
➤
ಈ ಸಡಿಲಿಕೆಯ ಪ್ರಮುಖ ಉದ್ದೇಶಗಳು ಇಂತಿವೆ:
=> ಜಾಗತಿಕ ರಕ್ಷಣಾ ಕಂಪನಿಗಳಿಂದ
ಆಧುನಿಕ ತಂತ್ರಜ್ಞಾನ ಮತ್ತು ಪರಿಣತಿ
ಭಾರತಕ್ಕೆ ತರಲು
=> ದೇಶೀಯ ಖಾಸಗಿ ವಲಯ ಮತ್ತು ಸ್ಟಾರ್ಟ್ಅಪ್ಗಳಿಗೆ
ವಿದೇಶಿ ಹೂಡಿಕೆ ಮತ್ತು ಸಹಭಾಗಿತ್ವದ ಅವಕಾಶ ಹೆಚ್ಚಿಸಲು
=> ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ,
ರಕ್ಷಣಾ ಉತ್ಪನ್ನಗಳ ದೇಶೀಯ ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು
=> ರಕ್ಷಣಾ ವಲಯದಲ್ಲಿ
ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡಲು
➤ ಸರ್ಕಾರದ ಅಂದಾಜಿನ ಪ್ರಕಾರ, FDI ನಿಯಮಗಳ ಸಡಿಲಿಕೆಯಿಂದ ಭಾರತವು ಜಾಗತಿಕ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ರೂಪುಗೊಳ್ಳಲು ನೆರವಾಗಲಿದ್ದು, ದೊಡ್ಡ ಪ್ರಮಾಣದ ಹೂಡಿಕೆ ಹರಿದುಬರುವ ಸಾಧ್ಯತೆ ಇದೆ. ಜೊತೆಗೆ, ಭಾರತೀಯ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ದೇಶದಲ್ಲೇ ತಯಾರಿಸುವ ಸಾಮರ್ಥ್ಯವೂ ಹೆಚ್ಚಲಿದೆ.
➤ ತಜ್ಞರ ಅಭಿಪ್ರಾಯದಂತೆ, ಈ ಕ್ರಮವನ್ನು ಸಮರ್ಪಕ ನೀತಿ ಚೌಕಟ್ಟಿನೊಂದಿಗೆ ಜಾರಿಗೊಳಿಸಿದಲ್ಲಿ,
ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಬೆಳವಣಿಗೆ ಎರಡಕ್ಕೂ ಲಾಭವಾಗಲಿದೆ
. ಆದರೆ, ತಂತ್ರಜ್ಞಾನ ವರ್ಗಾವಣೆ, ಡೇಟಾ ಭದ್ರತೆ ಮತ್ತು ದೇಶೀಯ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡುವತ್ತ ಸರ್ಕಾರ ಸೂಕ್ತ ಸಮತೋಲನ ಸಾಧಿಸುವ ಅಗತ್ಯವೂ ಇದೆ.
Take Quiz
Loading...