* ಒಂದೇ ಸ್ಥಳದಲ್ಲಿ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಸಮುಚ್ಚಯ ನಿರ್ಮಾಣದಿಂದ ದೇಶದ ಅತಿದೊಡ್ಡ ಮೊಬೈಲ್ ನೆಟ್ ವರ್ಕ್ ಆಪರೇಟರ್ ಎಂದು ಕೆಲವೇ ವರ್ಷದಲ್ಲಿ ಉದ್ಯಮವು ಬೆಳೆದಿದೆ. ಆದರೆ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಇಷ್ಟಕ್ಕೇ ತೃಪ್ತಿ ಆಗುವುದಿಲ್ಲ, ವಿಶ್ವದ ಟಾಪ್ 10 ಉದ್ಯಮ ಸಮೂಹಗಳಲ್ಲಿ ಒಂದಾಗಿ ಬೆಳೆಯಲಿದೆ (Top 10 Companies of World) ಎಂದು ಮುಕೇಶ್ ಅಂಬಾನಿ ಹೇಳಿದರು.*ರಿಲಯನ್ಸ್ ಸಮೂಹದ ಸ್ಥಾಪಕರಾದ ಧೀರೂಭಾಯಿ ಅಂಬಾನಿ ಅವರ ಜನ್ಮದಿನದ ಅಂಗವಾಗಿ ನಡೆದ ರಿಲಯನ್ಸ್ ಕುಟುಂಬ ದಿನಾಚರಣೆಯಲ್ಲಿ ಮಾತನಾಡಿದ ಮುಕೇಶ ಅಂಬಾನಿ ರಿಲಯನ್ಸ್ ಈಗ ಡಿಜಿಟಲ್ ಡೇಟ್ ಪ್ಲಾಟ್ ಫಾರ್ಮ್ಸ್ ಮತ್ತು ಎಐ (ಕೃತಕ ಬುದ್ಧಿಮತ್ತೆ) ಅಳವಡಿಕೆಯಲ್ಲಿ ಜಾಗತಿಕ ನಾಯಕರ ಸಾಲಿನಲ್ಲಿ ರಿಲಯನ್ಸ್ ಸ್ಥಾನ ಪಡೆಯುವ ಗುರಿ ಇರಿಸಿಕೊಂಡಿದೆ ಎಂದು ಹೇಳಿದರು* “ಇವತ್ತಿಗೆ ಉದ್ಯಮ ದೇಶೀಯ ಮತ್ತು ಜಾಗತಿಕ ಜಾಗತಿಕ ಪರಿಸರುವು ಬಹಳ ವೇಗವಾಗಿ ಬದಲಾಗುತ್ತಿದೆ. ಅಲ್ಲಿ ಸಂತೃಪ್ತಿಗೆ ಯಾವುದೇ ಅವಕಾಶ ಇಲ್ಲ,” ಎಂದು ಅವರು ತಿಳಿಸಿದ್ದು, “ರಿಲಯನ್ಸ್ ಹಿಂದೆಯೂ ಸಂತೃಪ್ತಗೊಂಡಿಲ್ಲ ಮತ್ತು ಭವಿಷ್ಯದಲ್ಲೂ ಸಂತೃಪ್ತ ಆಗುವುದಿಲ್ಲ,” ಎಂದು ಮುಕೇಶ ಅವರು ಹೇಳಿದರು.*  ರಿಲಯನ್ಸ್ ಇಂಡಸ್ಟ್ರೀಸ್ 2005ರಲ್ಲಿ ಚಿಲ್ಲರೆ (ರೀಟೇಲ್) ವಲಯವನ್ನು ಪ್ರವೇಶಿಸಿತು ಮತ್ತು ಈಗ ದೇಶದಲ್ಲಿ ಕಿರಾಣಿ ಅಂಗಡಿಗಳು, ಹೈಪರ್‌ಮಾರ್ಕೆಟ್‌ಗಳು ಮತ್ತು ಆನ್‌ಲೈನ್ ಚಿಲ್ಲರೆ ವ್ಯಾಪಾರದ ಅತಿದೊಡ್ಡ ಆಪರೇಟರ್ ಆಗಿದೆ. 2016ರಲ್ಲಿ ಇದು ಟೆಲಿಕಾಂ ಸೇವೆ ಜಿಯೋವನ್ನು ಪ್ರಾರಂಭಿಸಿತು, ಇದು ಶೀಘ್ರವಾಗಿ ಭಾರತದಲ್ಲಿ ಅತಿದೊಡ್ಡ ಆಪರೇಟರ್ ಮತ್ತು ವಿಶ್ವದ ಮೂರನೇ ಅತಿದೊಡ್ಡ ಆಪರೇಟರ್ ಆಯಿತು.* ಹೊಸ ವರ್ಷಕ್ಕೆ ತಮ್ಮ ಮೂರು ಪ್ರಮುಖ ಸಂದೇಶಗಳನ್ನು ಮುಕೇಶ್ ನೀಡಿದರು: ಡಿಜಿಟಲ್ ಡೇಟಾ ಪ್ಲಾಟ್‌ಫಾರ್ಮ್‌ಗಳು ಮತ್ತು ಎಐ ಅಳವಡಿಕೆಯಲ್ಲಿ ಜಾಗತಿಕ ನಾಯಕರಲ್ಲಿ ರಿಲಯನ್ಸ್ ಸ್ಥಾನವನ್ನು ಪಡೆಯುವುದು, ಪ್ರತಿಭೆಗಳ ಪುಷ್ಟೀಕರಣದಲ್ಲಿಯೂ ಜಾಗತಿಕ ನಾಯಕರಲ್ಲಿ ಒಬ್ಬರಾಗಿ ಸ್ಥಾನ ಪಡೆಯುವುದು ಮತ್ತು ಸಾಂಸ್ಥಿಕ ಸಂಸ್ಕೃತಿಯಲ್ಲಿಯೂ ಜಾಗತಿಕ ನಾಯಕರಲ್ಲಿ ಸುರಕ್ಷಿತ ಸ್ಥಾನ ಗಳಿಸಬೇಕು ಎಂದು ಅಂಬಾನಿ ಹೇಳಿದರು.