* ಭಾರತದ ಪ್ರಮುಖ ಸಂಘಟಿತ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Limited) ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಎಂ. ಅಂಬಾನಿ ಅವರನ್ನು ಕಂಪನಿಯ ಪೂರ್ಣಾವಧಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.* ಕಂಪನಿಯ ನಿರ್ದೇಶಕರ ಮಂಡಳಿ ಶುಕ್ರವಾರ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದು, ಮೇ 1 ರಿಂದ ಅನಂತ್ ಅಂಬಾನಿ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿ ತಮ್ಮ ಹೊಸ ಜವಾಬ್ದಾರಿ ವಹಿಸಲಿದ್ದಾರೆ.* ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶುಕ್ರವಾರ ಪ್ರಕಟಣೆ ಹೊರಡಿಸಿ, ಅನಂತ್ ಎಂ. ಅಂಬಾನಿ ಅವರನ್ನು ಕಂಪನಿಯ ಪೂರ್ಣಕಾಲಿಕ ನಿರ್ದೇಶಕರಾಗಿ ನೇಮಿಸಿರುವುದಾಗಿ ತಿಳಿಸಿದೆ.* ನಿರ್ದೇಶಕರ ಮಂಡಳಿಯ ಅನುಮೋದನೆಯೊಂದಿಗೆ, ಅನಂತ್ ಮುಖೇಶ್ ಅಂಬಾನಿ ಅವರನ್ನು ಮೇ 1, 2025ರಿಂದ ಮುಂದಿನ ಐದು ವರ್ಷಗಳ ಕಾಲ ರಿಲಯನ್ಸ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.