* ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿ ಸಭೆ (ಎಂಪಿಸಿ) ಅಕ್ಟೋಬರ್ 7 ರಿಂದ ಆರಂಭವಾಗಿದ್ದು ಈ ಬಾರಿಯೂ ರೆಪೊದರದಲ್ಲಿ ಉಪಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಗಳಿವೆ ಎಂದು ಹಣಕಾಸು ತಜ್ಞರು ತಿಳಿಸಿದ್ದಾರೆ.* ಈ ಹಣಕಾಸು ನೀತಿ ಸಮಿತಿ ಸಭೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರತೀ ಎರಡು ತಿಂಗಳಿಗೊಮ್ಮೆ ನಡೆಸುವ ಸಭೆಯಾಗಿದೆ. ಮೂರು ದಿನ ನಡೆಯುವ ಈ ಸಭೆಯಲ್ಲಿ ಮೊದಲ ಎರಡು ದಿನ ಪ್ರಮುಖ ಸಂಗತಿಗಳ ಚರ್ಚೆಯಾಗುತ್ತದೆ. ಅಕ್ಟೋಬರ್ 9ರಂದು  ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದು ಸಭೆಯ ನಿರ್ಧಾರಗಳನ್ನು ಪ್ರಕಟಗೊಳಿಸಲಿದ್ದಾರೆ.* ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರವಾಗಿದ್ದು. ಇದು ಕಚ್ಚಾತೈಲ ಮತ್ತು ಸರಕುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ.* ಪ್ರಸ್ತುತ ಬಡ್ಡಿದರ ಶೇ. 6.5ರಷ್ಟಿದೆ. ಕಳೆದ ಒಂದೂವರೆ ವರ್ಷದಿಂದ ಈ ದರದಲ್ಲಿ ಬದಲಾವಣೆ ಆಗಿಲ್ಲ. ಹಿಂದಿನ ಒಂಬತ್ತು ಸಭೆಗಳಲ್ಲಿ ಯಥಾಸ್ಥಿತಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ನಲ್ಲಿ ನಡೆಯುವ ಸಭೆಯಲ್ಲಿ ಬಡ್ಡಿದರ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತಿದೆ.* ಇತ್ತೀಚಿಗೆ ಹಣಕಾಸು ನೀತಿ ಸಮಿತಿಯನ್ನು ಪುನರ್ ರಚಿಸಲಾಗಿದೆ. ಆರ್ಬಿಐನ ಹಣಕಾಸು ನೀತಿ ಸಮಿತಿಯಲ್ಲಿ ಒಟ್ಟು ಆರು ಸದಸ್ಯರಿರುತ್ತಾರೆ. ಮೂವರು ಸದಸ್ಯರು ಆರ್ಬಿಐನ ಒಳಗಿನವರೇ ಆಗಿರುತ್ತಾರೆ. ಇತರ ಮೂವರು ಸದಸ್ಯರು ಹೊರಗಿನವರಾಗಿರುತ್ತಾರೆ.* ಆರ್ಬಿಐ ಗವರ್ನರ್ ಶಕ್ತಿಕಾಂತದಾಸ್, ಡೆಪ್ಯುಟಿ ಗವರ್ನರ್ ಮೈಕೇಲ್ ದೇವವ್ರತಾ ಪಾತ್ರ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಜೀವ್ ರಂಜನ್ ಅವರು ಆರ್ಬಿಐ ಅನ್ನು ಪ್ರತಿನಿಧಿಸುವ ಸದಸ್ಯರಾಗಿದ್ದಾರೆ. ಸೌಗತ ಭಟ್ಟಾಚಾರ್ಯ, ಡಾ. ನಾಗೇಶ್ ಕುಮಾರ್ ಮತ್ತು ಪ್ರೊಫೆಸರ್ ರಾಮ್ ಸಿಂಗ್ ಅವರು ಹೊಸದಾಗಿ ಎಂಪಿಸಿಗೆ ನೇಮಕವಾದ ಬಾಹ್ಯ ಸದಸ್ಯರಾಗಿದ್ದಾರೆ.