* ಎಟಿಎಂ ಕೇಂದ್ರಗಳಲ್ಲಿ ಯುಪಿಐ ಆಧರಿತ ನಗದು ಠೇವಣಿ ಸೌಲಭ್ಯಗಳನ್ನು ಜಾರಿಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ ) ನಿರ್ಧರಿಸಿದೆ. ಬಿಲ್ ಪಾವತಿ, ವ್ಯಾಪಾರ ವಹಿವಾಟು ಮತ್ತು ಇತರೆ ಡಿಜಿಟಲ್ ಪಾವತಿಗಳಿಗೆ ಸದ್ಯ ಯುಪಿಐ ಬಳಸಲಾಗುತ್ತಿದೆ. ಇನ್ನು ಮುಂದೆ ಇದರ ಮೂಲಕ ಬ್ಯಾಂಕ್‌ಗಳಿಗೆ ನಗದು ಠೇವಣಿ ಮಾಡುವ ವ್ಯವಸ್ಥೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. * ಪ್ರಸ್ತುತ ಎಟಿಎಂ ಯಂತ್ರಗಳ ಮೂಲಕ ಡೆಬಿಟ್ ಕಾರ್ಡ್ ಬಳಸಿ ನಗದು ಠೇವಣಿ ಮಾಡಲಾಗುತ್ತಿದೆ. ಈ ವೇಳೆ ಗ್ರಾಹಕರು ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಮೂದಿಸಬೇಕಿದೆ. ಆದರೆ, ಈ ಹೊಸ ವ್ಯವಸ್ಥೆಯಿಂದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ದಾಸ್ ಅವರು ಹೇಳಿದ್ದಾರೆ.
* ಅನುಕೂಲವೇನು?- ಗ್ರಾಹಕರು ಬ್ಯಾಂಕ್‌ಗಳಲ್ಲಿ ಸರದಿಯಲ್ಲಿ ಕಾಯುವ ಅಗತ್ಯವಿರುವುದಿಲ್ಲ- ಸುಲಭ ಹಾಗೂ ಸರಳವಾಗಿ ನಗದು ಠೇವಣಿ ಮಾಡಬಹುದು- ಬ್ಯಾಂಕ್ ಶಾಖೆಗಳಲ್ಲಿ ನಗದು ನಿರ್ವಹಣೆಯ ಭಾರ ತಗ್ಗಲಿದೆ* ಯುಪಿಐ ಮೂಲಕ ಹಣ ಜಮೆ ಹೇಗೆ?ಕ್ಯಾಷ್ ಡೆಪಾಸಿಟ್ ಮೆಷಿನ್‌ಗಳ ಮೂಲಕವೇ ಈ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಪ್ರಸ್ತುತ ಡೆಬಿಟ್ ಕಾರ್ಡ್‌ಗಳ ಮೂಲಕ ಹಣ ಜಮೆ ಮಾಡಬೇಕೆಂದರೆ, ನೀವು ಮೊದಲು ನಿಮ್ಮ ಕಾರ್ಡ್ ಹಾಕಿ, ಪಿನ್ ನಮೂದಿಸಿ, “ಡೆಪಾಸಿಟ್’ ಆಯ್ಕೆಯನ್ನು ಒತ್ತಿ, ನಗದನ್ನು ಜಮೆ ಮಾಡುತ್ತೀರಿ. ಯುಪಿಐ ಮೂಲಕ ಹಣ ಜಮೆ ಮಾಡುವುದಿದ್ದರೆ, ಡೆಬಿಟ್ ಕಾರ್ಡ್‌ನ ಬಳಕೆಯ ಬದಲಾಗಿ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರುವ ಯುಪಿಐ ಬಳಸಿ ಡೆಪಾಸಿಟ್ ಮಾಡಬೇಕಾಗುತ್ತದೆ.