Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
RBI ಯ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸಂಜಯ್ ಕುಮಾರ್ ಹನ್ಸ್ದಾ ನೇಮಕ
13 ಅಕ್ಟೋಬರ್ 2025
* ಭಾರತದ ಕೇಂದ್ರ ಬ್ಯಾಂಕ್ ಆಗಿರುವ
ಭಾರತೀಯ ರಿಸರ್ವ್ ಬ್ಯಾಂಕ್ (RBI)
ತನ್ನ ಹಿರಿಯ ಅಧಿಕಾರಿಗಳ ಪಟ್ಟಿಯಲ್ಲಿ ಮತ್ತೊಂದು ಪ್ರಮುಖ ನೇಮಕಾತಿಯನ್ನು ಮಾಡಿದೆ.
ಸಂಜಯ್ ಕುಮಾರ್
ಹನ್ಸ್ದಾ
ಅವರನ್ನು
ಕಾರ್ಯನಿರ್ವಾಹಕ ನಿರ್ದೇಶಕರಾಗಿ (Executive Director)
ನೇಮಿಸಲಾಗಿದೆ. ಅವರು
2025ರ ಅಕ್ಟೋಬರ್ 6ರಿಂದ ತಮ್ಮ ಹೊಸ ಹುದ್ದೆಯ ಅಧಿಕಾರ ವಹಿಸಿಕೊಂಡಿದ್ದಾರೆ.
* ಸಂಜಯ್ ಕುಮಾರ್ ಅವರು RBI ಯ ಆರ್ಥಿಕ ಮತ್ತು ನೀತಿ ಸಂಶೋಧನಾ ವಿಭಾಗದ (Department of Economic and Policy Research – DEPR) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ವಿಭಾಗವು ದೇಶದ ಆರ್ಥಿಕ ಸ್ಥಿತಿ, ಹಣಕಾಸು ನೀತಿ ರೂಪಣೆ, ಮತ್ತು ಹಣದುಬ್ಬರ ನಿಯಂತ್ರಣದ ವಿಶ್ಲೇಷಣೆ ಮಾಡುವ ಪ್ರಮುಖ ವಿಭಾಗಗಳಲ್ಲಿ ಒಂದಾಗಿದೆ.
* ಈ ಹುದ್ದೆಯಲ್ಲಿ ಅವರು ಹಣಕಾಸು ನೀತಿ ವಿಶ್ಲೇಷಣೆ, ಕ್ರೋ ಇಕಾನಾಮಿಕ್ ಸಂಶೋಧನೆ, ಹಣದುಬ್ಬರ ಮತ್ತು ಬಡ್ಡಿದರಗಳ ನೀತಿ ತಯಾರಿ,ಹಾಗೂ ಕೇಂದ್ರ ಬ್ಯಾಂಕಿನ ಆರ್ಥಿಕ ವರದಿ ತಯಾರಿಕಾ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.
🔹
ಸಂಜಯ್ ಕುಮಾರ್ ಹನ್ಸ್ದಾ
ಅವರ ವೃತ್ತಿ ಪಯಣ
* ಸಂಜಯ್ ಕುಮಾರ್ ಅವರು ಮೂರು ದಶಕಗಳಿಗೂ ಹೆಚ್ಚುಕಾಲದ ಕೇಂದ್ರ ಬ್ಯಾಂಕಿಂಗ್ ಮತ್ತು ಆರ್ಥಿಕ ಸಂಶೋಧನಾ ಅನುಭವವನ್ನು ಹೊಂದಿದ್ದಾರೆ.
* ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)ಯಲ್ಲಿ ಸೀನಿಯರ್ ಅಡ್ವೈಸರ್ (Senior Advisor) ಆಗಿ ಕೆಲಸಮಾಡಿ, ಅಂತರರಾಷ್ಟ್ರೀಯ ಹಣಕಾಸು ನೀತಿಗಳ ವಿನ್ಯಾಸ ಮತ್ತು ಮೌಲ್ಯಮಾಪನದ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.
* ಆರ್ಥಿಕ ನೀತಿ, ಹಣಕಾಸು ಮಾರುಕಟ್ಟೆ ವಿಶ್ಲೇಷಣೆ, ಮತ್ತು ಸಂಶೋಧನಾ ನಿರ್ವಹಣೆಯ ಕ್ಷೇತ್ರದಲ್ಲಿ ಅವರಿಗೆ ವಿಶಾಲ ಅನುಭವವಿದೆ.
* ಸಂಜಯ್ ಕುಮಾರ್ ಅವರ ನೇಮಕಾತಿಯೊಂದಿಗೆ, RBI ಯ ಆರ್ಥಿಕ ಮತ್ತು ನೀತಿ ಸಂಶೋಧನಾ ವಿಭಾಗ ಮತ್ತಷ್ಟು ಬಲಗೊಳ್ಳಲಿದೆ.
* ಈ ವಿಭಾಗದ ಕಾರ್ಯಪದ್ಧತಿಗಳು ಭಾರತದ ಹಣಕಾಸು ನೀತಿಗಳ ನಿರ್ಮಾಣದಲ್ಲಿ ನೇರ ಪ್ರಭಾವ ಬೀರುತ್ತವೆ ಹಾಗಾಗಿ ಅವರ ಅನುಭವ ಮತ್ತು ತಜ್ಞತೆಯಿಂದ RBI ಯ ನಿರ್ಧಾರ ಪ್ರಕ್ರಿಯೆಗೆ ಹೊಸ ಶಕ್ತಿ ಸಿಗಲಿದೆ.
Take Quiz
Loading...