* 2023-24ರ ಆರ್ಥಿಕ ವರ್ಷದಲ್ಲಿ ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾದ ವರಮಾನದಲ್ಲಿ ಶೇ 17.04ರಷ್ಟು ಏರಿಕೆಯಾಗಿದ್ದರೆ, ವೆಚ್ಚದ ಪ್ರಮಾಣವು ಶೇ 56.30ರಷ್ಟು ತಗ್ಗಿದೆ. ಒಟ್ಟು ಜಮಾ-ಖರ್ಚು ಪಟ್ಟಿಯ (ಬ್ಯಾಲನ್ಸ್ ಷೀಟ್) ಗಾತ್ರವೂ ಹೆಚ್ಚಳವಾಗಿದೆ.* 2022-23ನೇ ಆರ್ಥಿಕ ವರ್ಷದಲ್ಲಿ ₹2.35 ಲಕ್ಷ ಕೋಟಿ ವರಮಾನ ಗಳಿಸಿತ್ತು. 2023-24ರಲ್ಲಿ ₹2.75 ಲಕ್ಷ ಕೋಟಿ ಗಳಿಸಿದೆ ಎಂದು ವಾರ್ಷಿಕ ವರದಿ ತಿಳಿಸಿದೆ.* ಬಡ್ಡಿ ವರಮಾನವು ₹1.88 ಲಕ್ಷ ಕೋಟಿ ಆಗಿದೆ. ವಿದೇಶಿ ಸೆಕ್ಯುರಿಟೀಸ್ ಗಳಿಂದ ₹65,327 ಕೋಟಿ ಬಡ್ಡಿ ವರಮಾನ ಗಳಿಸಿದೆ. ತುರ್ತು ನಿಧಿಗೆ ₹42,820 ಕೋಟಿ ನೀಡಿದೆ.* 2023ರ ಮಾರ್ಚ್ ಅಂತ್ಯಕ್ಕೆ ಆರ್‌ಬಿಐನ ಜಮಾ-ಖರ್ಚು ಪಟ್ಟಿಯ ಮೊತ್ತ ₹63.45 ಲಕ್ಷ ಕೋಟಿ ಇತ್ತು. ಪ್ರಸಕ್ತ ವರ್ಷದ ಮಾರ್ಚ್ ಅಂತ್ಯಕ್ಕೆ ₹70.47 ಲಕ್ಷ ಕೋಟಿಗೆ ಮುಟ್ಟಿದೆ. ఒట్టు ₹7.02 ಸೇರ್ಪಡೆಯಾಗಿದ್ದು, ಒಟ್ಟಾರೆ 11.08ರಷ್ಟು ಏರಿಕೆಯಾಗಿದೆ. * 2024-25ನೇ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಆರ್‌ಬಿಐ ತಿಳಿಸಿದೆ. ದೇಶದ ಸ್ಕೂಲ ಆರ್ಥಿಕ ಅಂಶಗಳು ಬಲಗೊಂಡಿವೆ. ಹಾಗಾಗಿ, ಭಾರತದ ಆರ್ಥಿಕತೆಯು ಜಾಗತಿಕ ಮಟ್ಟದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ ಎಂದು ಹೇಳಿದೆ.* ಚಿಲ್ಲರೆ ಹಣದುಬ್ಬರವು ಇಳಿಕೆಯಾಗಲಿದೆ ಎಂದು ವರದಿ ಹೇಳಿದೆ. ಆದರೂ, ಪೂರೈಕೆ ಸರಪಳಿಯಲ್ಲಿನ ಕೊರತೆಯಿಂದಾಗಿ ಆಹಾರದ ಹಣದುಬ್ಬರ ಏರಿಕೆಯಾಗಲಿದೆ ಎಂದು ಅಂದಾಜಿಸಿದೆ.