* ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of india) ಹಣಕಾಸು ನೀತಿ ಸಮಿತಿ ಸಭೆಯು ಸತತ 11ನೇ ಬಾರಿಯೂ ರೆಪೋ (Repo Rate) ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ* ಅತಿಯಾದ ಹಣದುಬ್ಬರ ಮತ್ತು ಪ್ರಸಕ್ತ ಆರ್ಥಿಕ ವರ್ಷದ ಹಣಕಾಸು ಪ್ರಗತಿಯ ಗುರಿ ಮುಟ್ಟುವ ಹಿನ್ನೆಲೆಯಲ್ಲಿ ರೆಪೋ ದರದಲ್ಲಿ ಈ ಹಿಂದಿನಂತೆ ಶೇ.6.5ರ ಮಿತಿಯಲ್ಲೇ ಮುಂದುವರಿಸುವ ತೀರ್ಮಾನ ಮೂರು ದಿನಗಳ ಕಾಲ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಆರ್ ಬಿಐ (RBI) ಗವರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.* ಶುಕ್ರವಾರ (ಡಿ.06) ಮುಕ್ತಾಯಗೊಂಡ ಸಭೆಯಲ್ಲಿ ಆರು ಸದಸ್ಯರ ಪೈಕಿ 4 ಸದ್ಯಸ್ಯರು ಶೇ.6.5 ರಷ್ಟು ಕಾಯ್ದುಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ.* ಸಭೆಯ ಬಳಿಕ ಮಾತನಾಡಿದ ಗವರ್ನರ್ ಜನರಲ್ ಶಕ್ತಿಕಾಂತ್ ದಾಸ್, ದೇಶದ ಆರ್ಥಿಕತೆ ಬೆಳವಣಿಗೆಯು ಮಂದಗತಿಯಲ್ಲಿದೆ. ಇದಕ್ಕೆ ಉತ್ತೇಜನ ನೀಡುವನಿಟ್ಟಿನಲ್ಲಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.* ಇತ್ತೀಚೆಗಿನ ವರ್ಷಗಳಲ್ಲಿ ಜಗತ್ತಿನಲ್ಲಿ ಒಂದರ ನಂತರ ಮತ್ತೊಂದು ಬಿಕ್ಕಟ್ಟು ದ್ಭವಿಸುತ್ತಲೇ ಇದೆ. ಆದರೆ ಭಾರತದ ಆರ್ಥಿಕತೆ ಬಲಿಷ್ಠವಾಗುತ್ತಿದೆ. ಆದರೂ ನಾವು ಜಾಗತಿಕ ಮಟ್ಟದ ಬೆಳವಣಿಗೆ ಬಗ್ಗೆ ತೀವ್ರ ನಿಗಾ ಇರಿಸಬೇಕಾದ ಅಗತ್ಯವಿದೆ ಎಂದು ದಾಸ್ ಹೇಳಿದರು.* ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ಆಂತರಿಕ ಉತ್ಪನ್ನ (GDP) ಶೇ. 5.40 ದಾಖಲಾಗಿದೆ. ಅಕ್ಟೋಬರ್ ನಲ್ಲಿ ಹಣದುಬ್ಬರವು ಶೇ 6.21ರಷ್ಟು ದಾಖಲಾಗಿದೆ.