Job Description: ➤ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತದ ಲಾಭಾಂಶವನ್ನು (Dividend/Surplus) ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಅನುಮೋದನೆ ನೀಡಿದೆ. ಮುಂಬೈನಲ್ಲಿ ನಡೆದ ಆರ್‌ಬಿಐನ ಕೇಂದ್ರೀಯ ನಿರ್ದೇಶಕರ ಮಂಡಳಿಯ 623ನೇ ಸಭೆಯಲ್ಲಿ 2025-26ರ ಆರ್ಥಿಕ ವರ್ಷಕ್ಕೆ ಬರೋಬ್ಬರಿ ₹2,86,588.46 ಕೋಟಿ (ಅಂದಾಜು ₹2.87 ಲಕ್ಷ ಕೋಟಿ) ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಇದು ದೇಶದ ಆರ್ಥಿಕತೆಗೆ ಮತ್ತು ಬಜೆಟ್ ನಿರ್ವಹಣೆಗೆ ಭಾರಿ ಬೂಸ್ಟರ್ ಡೋಸ್ ನೀಡಲಿದೆ. ➤ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (Governor Sanjay Malhotra) ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ. ಕಳೆದ ವರ್ಷ (2024-25) ಆರ್‌ಬಿಐ ₹2.69 ಲಕ್ಷ ಕೋಟಿ ವರ್ಗಾಯಿಸಿತ್ತು. ಈ ಬಾರಿಯ ಮೊತ್ತವು ಕಳೆದ ವರ್ಷಕ್ಕಿಂತ ಸುಮಾರು ಶೇ. 6.7 ರಷ್ಟು ಹೆಚ್ಚಾಗಿದೆ. ಮಾರ್ಚ್ 31, 2026 ರ ವೇಳೆಗೆ ಆರ್‌ಬಿಐನ ಒಟ್ಟು ಬ್ಯಾಲೆನ್ಸ್ ಶೀಟ್ ಗಾತ್ರವು ಶೇ. 20.61 ರಷ್ಟು ಹೆಚ್ಚಾಗಿದ್ದು, ₹91.97 ಲಕ್ಷ ಕೋಟಿ ತಲುಪಿದೆ. ➤ ಸಾಮಾನ್ಯವಾಗಿ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್‌ಗಳಂತೆ ಲಾಭಕ್ಕಾಗಿ ಕೆಲಸ ಮಾಡುವುದಿಲ್ಲ. ಆದರೆ ಈ ಕೆಳಗಿನ ಪ್ರಮುಖ ಕಾರಣಗಳಿಂದಾಗಿ ಆರ್‌ಬಿಐಗೆ ದಾಖಲೆಯ ಆದಾಯ ಬಂದಿದೆ:- ವಿದೇಶಿ ವಿನಿಮಯ ಗಳಿಕೆ (Forex Earnings): ಡಾಲರ್ ಎದುರು ರೂಪಾಯಿ ಮೌಲ್ಯದ ಏರಿಳಿತದ ಸಮಯದಲ್ಲಿ ಆರ್‌ಬಿಐ ನಡೆಸಿದ ವಿದೇಶಿ ವಿನಿಮಯ ಮಾರುಕಟ್ಟೆ ಕಾರ್ಯಾಚರಣೆಗಳು ಮತ್ತು ಡಾಲರ್ ಮಾರಾಟದಿಂದ ಭಾರಿ ಲಾಭ ಬಂದಿದೆ.- ಹೂಡಿಕೆಗಳ ಮೇಲಿನ ಆದಾಯ: ವಿದೇಶಿ ಸೆಕ್ಯೂರಿಟಿಗಳು ಮತ್ತು ಸರ್ಕಾರಿ ಬಾಂಡ್‌ಗಳ ಮೇಲಿನ ಹೂಡಿಕೆಯಿಂದ ಹೆಚ್ಚಿನ ಬಡ್ಡಿಯ ಆದಾಯ ಲಭಿಸಿದೆ.- ಒಟ್ಟು ಆದಾಯದ ವೃದ್ಧಿ: ಕಳೆದ ವರ್ಷಕ್ಕೆ ಹೋಲಿಸಿದರೆ ಆರ್‌ಬಿಐನ ಒಟ್ಟು ಆದಾಯವು ಶೇಕಡಾ 26.42 ರಷ್ಟು ಜಿಗಿತ ಕಂಡಿದ್ದು, ರಿಸ್ಕ್ ಪ್ರಾವಿಷನ್‌ಗಿಂತ ಮುಂಚಿನ ನಿವ್ವಳ ಆದಾಯವು ₹3.96 ಲಕ್ಷ ಕೋಟಿಗೆ ತಲುಪಿದೆ. ➤ ಕೇಂದ್ರ ಸರ್ಕಾರಕ್ಕೆ ಈ ದಾಖಲೆಯ ಆರ್‌ಬಿಐ ಡಿವಿಡೆಂಡ್‌ನಿಂದಾಗಿ ಹೊಸದಾಗಿ ಸಾಲ ಮಾಡುವ ಅವಶ್ಯಕತೆ ಇಲ್ಲದೆ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಹಣ ಒದಗಿಸಲು, ಬಜೆಟ್ ಅಂದಾಜನ್ನು ತಲುಪಲು ಮತ್ತು ರಾಜಕೋಶದ ಕೊರತೆಯನ್ನು ನಿಗದಿತ ಗುರಿಯೊಳಗೆ ನಿಯಂತ್ರಿಸಲು ಭಾರಿ ನೆರವಾಗುತ್ತದೆ. ಏಪ್ರಿಲ್ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ