➤ ಅಫ್ಘಾನಿಸ್ತಾನ ತಂಡದ ನಾಯಕ ಮತ್ತು ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ (Rashid Khan) ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಅಪ್ರತಿಮ ದಾಖಲೆಯೊಂದನ್ನು ಬರೆದಿದ್ದಾರೆ. ದೆಹಲಿಯಲ್ಲಿ ನಡೆದ ಯುಎಇ (UAE) ವಿರುದ್ಧದ ಟಿ20 ವಿಶ್ವಕಪ್ 2026ರ ಪಂದ್ಯದಲ್ಲಿ ರಶೀದ್ ಖಾನ್ ಅವರು 700 ಟಿ20 ವಿಕೆಟ್ಗಳನ್ನು ಪೂರ್ಣಗೊಳಿಸುವ ಮೂಲಕ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೈಲಿಗಲ್ಲನ್ನು ಸಾಧಿಸುವ ಮೂಲಕ ರಶೀದ್ ಖಾನ್, ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೋ ಅವರ ಸುದೀರ್ಘ ಕಾಲದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ➤ ರಶೀದ್ ಖಾನ್ ಅವರ ಸಾಧನೆ ಕೇವಲ ಫ್ರಾಂಚೈಸಿ ಲೀಗ್‌ಗಳಿಗೆ ಸೀಮಿತವಾಗಿಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲೂ ಅವರು ಪ್ರಾಬಲ್ಯ ಸಾಧಿಸಿದ್ದಾರೆ:- T20I ವಿಕೆಟ್‌ಗಳು: 191 - ನಾಲ್ಕು ವಿಕೆಟ್ ಸಾಧನೆ: ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 11 ಬಾರಿ ಮತ್ತು ಒಟ್ಟಾರೆ ಟಿ20ಯಲ್ಲಿ 22 ಬಾರಿ 4 ವಿಕೆಟ್ ಕಿತ್ತಿದ್ದಾರೆ.- ಬೌಲ್ಡ್ ಮತ್ತು ಎಲ್‌ಬಿಡಬ್ಲ್ಯೂ (LBW): ಅವರ ಒಟ್ಟು ವಿಕೆಟ್‌ಗಳಲ್ಲಿ 54% ರಷ್ಟು (379 ವಿಕೆಟ್) ಬ್ಯಾಟರ್‌ಗಳನ್ನು ಬೌಲ್ಡ್ ಅಥವಾ ಎಲ್‌ಬಿಡಬ್ಲ್ಯೂ ಮಾಡುವ ಮೂಲಕವೇ ಪಡೆದಿದ್ದಾರೆ.➤ ವಿವಿಧ ದೇಶಗಳಲ್ಲಿ ರಶೀದ್ ಅಬ್ಬರ: ಭಾರತದಲ್ಲಿ: 181 ವಿಕೆಟ್, ಯುಎಇಯಲ್ಲಿ: 131 ವಿಕೆಟ್, ಆಸ್ಟ್ರೇಲಿಯಾದಲ್ಲಿ: 102 ವಿಕೆಟ್, ಏಷ್ಯಾದಲ್ಲಿ ಒಟ್ಟಾರೆ: 406 ವಿಕೆಟ್ (ಏಷ್ಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ).➤ ಪ್ರಮುಖ ತಂಡಗಳ ಪರ ರಶೀದ್ ಖಾನ್ ಸಾಧನೆ: ಅಫ್ಘಾನಿಸ್ತಾನ: 195 ವಿಕೆಟ್, ಅಡಿಲೇಡ್ ಸ್ಟ್ರೈಕರ್ಸ್ (BBL): 98 ವಿಕೆಟ್, ಸನ್‌ರೈಸರ್ಸ್ ಹೈದರಾಬಾದ್ (IPL): 93 ವಿಕೆಟ್, ಗುಜರಾತ್ ಟೈಟಾನ್ಸ್ (IPL): 65 ವಿಕೆಟ್➤ ಟಿ20 ಇತಿಹಾಸದಲ್ಲಿ ಮೈಲಿಗಲ್ಲು ತಲುಪಿದ ಬೌಲರ್‌ಗಳ ಪಟ್ಟಿ: - 50 ವಿಕೆಟ್: ನಯನ್ ದೋಶಿ- 100 ವಿಕೆಟ್: ಡಿರ್ಕ್ ನ್ಯಾನೆಸ್- 300 ವಿಕೆಟ್: ಡ್ವೇನ್ ಬ್ರಾವೋ- 500 ವಿಕೆಟ್: ಡ್ವೇನ್ ಬ್ರಾವೋ- 700 ವಿಕೆಟ್: ರಶೀದ್ ಖಾನ್