Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಇಂಡಿಯಾ AI ಶೃಂಗಸಭೆ 2026'ರಲ್ಲಿ ವಿಶ್ವದ ಗಮನ ಸೆಳೆದ 8 ವರ್ಷದ ಬಾಲಕ ರಣವೀರ್
Authored by:
Akshata Halli
Date:
21 ಫೆಬ್ರುವರಿ 2026
➤
ನವದೆಹಲಿಯ
ಭಾರತ್ ಮಂಟಪಂ
ನಲ್ಲಿ ನಡೆದ
ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026 (India AI Impact Summit 2026)
ರಲ್ಲಿ 8 ವರ್ಷದ ಬಾಲಕ ರಣವೀರ್ ಸಚ್ದೇವ ಎಲ್ಲರ ಗಮನ ಸೆಳೆದಿದ್ದಾನೆ. ಜಾಗತಿಕ ತಂತ್ರಜ್ಞಾನ ನಾಯಕರು ಮತ್ತು ನೀತಿ ನಿರೂಪಕರ ಸಮ್ಮುಖದಲ್ಲಿ ಮಾತನಾಡಿದ ರಣವೀರ್, ಈ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅತ್ಯಂತ ಕಿರಿಯ 'ಕೀನೋಟ್ ಸ್ಪೀಕರ್' ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ತನ್ನನ್ನು ತಾನು
'ಟೆಕ್ನಾಲಜಿಸ್ಟ್' (Technologist)
ಎಂದು ಕರೆದುಕೊಂಡ ರಣವೀರ್, ಭಾರತೀಯ ದರ್ಶನಶಾಸ್ತ್ರಗಳನ್ನು ಆಧುನಿಕ AI ತಂತ್ರಜ್ಞಾನದೊಂದಿಗೆ ಹೇಗೆ ಸಂಯೋಜಿಸಬಹುದು ಎಂಬ ಕುರಿತು ಅದ್ಭುತವಾಗಿ ವಿವರಿಸಿದನು.
➤
ಈ ಶೃಂಗಸಭೆಯ ಸಂದರ್ಭದಲ್ಲಿ ರಣವೀರ್ ಜಗತ್ತಿನ ಪ್ರಮುಖ ಟೆಕ್ ದಿಗ್ಗಜರನ್ನು ಭೇಟಿ ಮಾಡಿದನು:
ಸುಂದರ್ ಪಿಚೈ:
ಗೂಗಲ್ (Google) ಸಿಇಒ,
ಸ್ಯಾಮ್ ಆಲ್ಟ್ಮನ್:
ಓಪನ್ ಎಐ (OpenAI) ಸಿಇಒ, ಈ ಹಿಂದೆ ಆಪಲ್ ಸಿಇಒ
ಟಿಮ್ ಕುಕ್
, ಸೇಲ್ಸ್ಫೋರ್ಸ್ ಸಿಇಒ
ಮಾರ್ಕ್ ಬೆನಿಯೋಫ್
ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ
ಆಂಟೋನಿಯೊ ಗುಟೆರೆಸ್
ಅವರನ್ನೂ ಭೇಟಿ ಮಾಡಿ ಮೆಚ್ಚುಗೆ ಗಳಿಸಿದ್ದಾನೆ.
➤
ರಣವೀರ್ ಸಚ್ದೇವ ಅವರ ಪ್ರಮುಖ ಸಾಧನೆಗಳು:
-
ಕೋಡಿಂಗ್ ಆರಂಭ:
ಕೇವಲ 3ನೇ ವಯಸ್ಸಿನಲ್ಲಿ ಕೋಡಿಂಗ್ ಕಲಿಯಲು ಆರಂಭಿಸಿದನು.
-
TEDx ಸ್ಪೀಕರ್:
6ನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ TEDx ವಾಗ್ಮಿಯಾಗಿ ದಾಖಲೆ ನಿರ್ಮಿಸಿದನು.
-
ಮಾರ್ಸ್ ಮಿಷನ್:
4ನೇ ವಯಸ್ಸಿನಲ್ಲಿ ಮಂಗಳ ಗ್ರಹದ ಪರಿಶೋಧನೆಗಾಗಿ ರಾಕೆಟ್ ಪ್ರೋಟೋಟೈಪ್ ಸಿದ್ಧಪಡಿಸಿ ನಾಸಾದ (NASA) JPL ನಿಂದ ಮನ್ನಣೆ ಪಡೆದಿದ್ದಾನೆ.
-
ಪುಸ್ತಕ ರಚನೆ:
ಇವನು ಬರೆದ
"Are You Born With AI?"
ಎಂಬ ಪುಸ್ತಕವು ಜಾಗತಿಕವಾಗಿ ಮನ್ನಣೆ ಪಡೆದಿದೆ.
-
AI ಸಾಕ್ಷರತೆ:
ಭಾರತದ ಜಿಡಿಪಿ (GDP) ಹೆಚ್ಚಿಸಲು ಮತ್ತು ಜನರಲ್ಲಿ AI ಸಾಕ್ಷರತೆ ಮೂಡಿಸಲು ಭಾರತೀಯ AI ಮಾದರಿಗಳನ್ನು ಬಳಸುವ ಕುರಿತು ಕೆಲಸ ಮಾಡುತ್ತಿದ್ದಾನೆ.
➤
ಪರೀಕ್ಷಾ ದೃಷ್ಟಿಕೋನದಿಂದ ಪ್ರಮುಖ ಅಂಶಗಳು:
-
ITU (International Telecommunication Union):
ಇದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕಾಗಿ ಇರುವ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದೆ. ರಣವೀರ್ ಇದರ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾನೆ.
-
AI ಮಾದರಿ:
ಭಾರತವು ತನ್ನದೇ ಆದ ಸ್ವದೇಶಿ AI ಮಾದರಿಗಳನ್ನು (ಉದಾಹರಣೆಗೆ: Bhashini) ಅಭಿವೃದ್ಧಿಪಡಿಸುವ ಮೂಲಕ ತಾಂತ್ರಿಕ ಸಾರ್ವಭೌಮತ್ವದತ್ತ ಹೆಜ್ಜೆ ಹಾಕುತ್ತಿದೆ.
- "ನಾವು ಕೇವಲ ತಂತ್ರಜ್ಞಾನದ ಗ್ರಾಹಕರಾಗದೆ (Consumers), ಅದರ ನಿರ್ಮಪಕರಾಗಬೇಕು (Builders)." - ರಣವೀರ್ ಸಚ್ದೇವ.
Take Quiz
Loading...