* ವಿಜಯ್ ಹಜಾರೆ ಫೈನಲ್ನಲ್ಲಿ ಕರ್ನಾಟಕ ವಿರುದ್ಧ ಸೋಲು ಕಂಡು ನಿರಾಶೆ ಅನುಭವಿಸಿದ್ದ ವಿದರ್ಭ ತಂಡ 2024-25ರ ಪ್ರತಿಷ್ಠಿತ ರಣಜಿ ಟ್ರೋಫಿಯನ್ನು ಗೆಲ್ಲುವ ಮೂಲಕ 2024-25 ದೇಶಿ ಋತುವನ್ನ ಟ್ರೋಫಿಯೊಂದಿಗೆ ಅಂತ್ಯಗೊಳಿಸಿದೆ.* ಭಾನುವಾರ (ಮಾರ್ಚ್ 02) ನಾಗ್ಪುರದಲ್ಲಿ ಕೇರಳ ವಿರುದ್ಧದ ಅಂತಿಮ ಪಂದ್ಯ ಡ್ರಾ ನಿಂದ ಕೊನೆಗೊಂಡಿತು. ಅದರೊಂದಿಗೆ, ಪ್ರಥಮ ಇನ್ನಿಂಗ್ಸ್ನಲ್ಲಿ ಮುನ್ನಡೆ ಪಡೆದ ವಿದರ್ಭವನ್ನು ಈ ಪಂದ್ಯದಲ್ಲಿ ಜಯ ಸಾಧಿಸಿತು.* ವಿದರ್ಭ ತನ್ನ ರಣಜಿ ಟ್ರೋಫಿ ಇತಿಹಾಸದಲ್ಲಿ ಮೂರನೇ ಬಾರಿ ಪ್ರಶಸ್ತಿ ಗೆದ್ದಿದೆ. ಅನುಭವಿ ಬ್ಯಾಟ್ಸ್ಮನ್ ಕರುಣ್ ನಾಯರ್ ಎರಡೂ ಇನ್ನಿಂಗ್ಸ್ನಲ್ಲಿ ಉತ್ತಮ ಆಟವಾಡಿ ಪ್ರಮುಖ ಪಾತ್ರವಹಿಸಿದರು.* ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ತಂಡ ಮೊದಲ ಇನ್ನಿಂಗ್ಸ್ನಲ್ಲಿ 123.1 ಓವರ್ಗಳಲ್ಲಿ 379 ರನ್ಗಳಿಗೆ ಆಲೌಟ್ ಆಗಿತ್ತು. ದಾನಿಶ್ ಮಾಲೆವರ್ 285 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 153 ರನ್ ಸಿಡಿಸಿದರೆ, ಕರುಣ್ ನಾಯರ್ 188 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ನೊಂದಿಗೆ 86 ರನ್ ಸಿಡಿಸಿ ಶತಕ ವಂಚಿತರಾಗಿದ್ದರು. ಕೇರಳ ಪರ ಈಡೆನ್ ಆಪಲ್ 3, ಎಂಡಿ ನಿದೀಶ್ 3 ವಿಕೆಟ್ ಪಡೆದು ಮಿಂಚಿದ್ದರು.* ತಂಡಕ್ಕೆ ವಿದರ್ಭ ಕ್ರಿಕೆಟ್ ಸಂಸ್ಥೆ 3 ಕೋಟಿ ರೂ. ಬಹುಮಾನ ಘೋಷಿಸಿದೆ. ಸಹಾಯಕ ಸಿಬ್ಬಂದಿ ಹಾಗೂ ಕೆಲ ಆಟಗಾರರಿಗೆ ಪ್ರತ್ಯೇಕ ನಗದು ಬಹುಮಾನ ಪ್ರಕಟಿಸಿದೆ. ಗೆಲುವಿನೊಂದಿಗೆ ದೇಶೀಯ ಕ್ರಿಕೆಟ್ಗೆ ವಿದಾಯ ಹೇಳಿದ ಅಕ್ಷಯ್ ವಾಡ್ಕರ್ ಅವರನ್ನು ಸನ್ಮಾನಿಸಿದ ವಿದರ್ಭ ಸಂಸ್ಥೆ, ಹಾಲಿ ಋತುವಿನಲ್ಲಿ ಅತ್ಯಧಿಕ 69 ವಿಕೆಟ್ ಪಡೆದ ಸ್ಪಿನ್ನರ್ ಹರ್ಷ್ ದುಬೆಗೆ 25 ಲಕ್ಷ ರೂ. ಹಾಗೂ 863 ರನ್ ಕಲೆಹಾಕಿದ ಕರುಣ್ ನಾಯರ್ ಮತ್ತು 960 ರನ್ ಪೇರಿಸಿದ ಯಶ್ ರಾಥೋಡ್ ತಲಾ 10 ಲಕ್ಷ ರೂ. ಇನಾಮು ಘೋಷಿಸಿದೆ.