Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ರಾಜಾ ರವಿವರ್ಮ ಅವರ ಚಿತ್ರಕಲೆ ಹೊಸ ಇತಿಹಾಸ: ಭಾರತೀಯ ಹರಾಜು ಮಾರುಕಟ್ಟೆಯಲ್ಲಿ ₹49.44 ಕೋಟಿಗೆ ಮಾರಾಟ!
Authored by:
Akshata Halli
Date:
4 ಎಪ್ರಿಲ್ 2026
➤
ಭಾರತೀಯ ಆಧುನಿಕ ಚಿತ್ರಕಲೆಯ ಪಿತಾಮಹ ರಾಜಾ ರವಿವರ್ಮ ಅವರ ಕುಂಚದಲ್ಲಿ ಅರಳಿದ
"ಇಂದ್ರಜಿತ್ ವಿಜಯ" (Indrajit’s Victory)
ಅಥವಾ
"ಪ್ರತಿಮಾ"
ಎಂಬ ಅಪರೂಪದ ತೈಲಚಿತ್ರವು,
2026ರ ಏಪ್ರಿಲ್ 2
ರಂದು ನಡೆದ ಮುಂಬೈನ ಪುಂಡ್ಕೋಲ್ಸ್ (Pundole’s) ಹರಾಜಿನಲ್ಲಿ ಬರೋಬ್ಬರಿ
₹49.44 ಕೋಟಿ
(5.9 ಮಿಲಿಯನ್ ಡಾಲರ್) ಗೆ ಮಾರಾಟವಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಭಾರತೀಯ ಕಲಾ ಇತಿಹಾಸದಲ್ಲಿ ರಾಜಾ ರವಿವರ್ಮ ಅವರ ಕಲಾಕೃತಿಯೊಂದು ಇದುವರೆಗೆ ಪಡೆದ ಅತ್ಯಧಿಕ ಮೊತ್ತ ಇದಾಗಿದ್ದು, ಈ ಮಹತ್ವದ ಬೆಳವಣಿಗೆಯು ಜಾಗತಿಕ ಕಲಾ ಮಾರುಕಟ್ಟೆಯಲ್ಲಿ ಭಾರತೀಯ ಪೌರಾಣಿಕ ಚಿತ್ರಕಲೆಗೆ ಇರುವ ಅಪಾರ ಬೇಡಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಚಿತ್ರದ ಹೆಸರು:
ಇಂದ್ರಜಿತ್ ವಿಜಯ (Indrajit’s Victory / Pratima).
ಹರಾಜು ಸಂಸ್ಥೆ:
ಪುಂಡ್ಕೋಲ್ಸ್ (Pundole’s) ಹರಾಜು ಸಂಸ್ಥೆ.
➤
ಈ ಕಲಾಕೃತಿಯು ರಾಮಾಯಣದ ಒಂದು ಪ್ರಮುಖ ಘಟನೆಯನ್ನು ಆಧರಿಸಿದೆ. ರಾವಣನ ಮಗ ಇಂದ್ರಜಿತ್ (ಮೇಘನಾದ), ದೇವತೆಗಳ ರಾಜ ಇಂದ್ರನನ್ನು ಯುದ್ಧದಲ್ಲಿ ಸೋಲಿಸಿ, ಅವನನ್ನು ಕೈದಿಯಾಗಿ ಲಂಕೆಗೆ ಕರೆತರುತ್ತಿರುವ ದೃಶ್ಯವನ್ನು ಈ ಚಿತ್ರವು ಅದ್ಭುತವಾಗಿ ಚಿತ್ರಿಸುತ್ತದೆ. ಚಿತ್ರದಲ್ಲಿನ ಭಾವನೆಗಳು, ಬಣ್ಣಗಳ ಬಳಕೆ ಮತ್ತು ಪಾತ್ರಗಳ ವಸ್ತ್ರವಿನ್ಯಾಸವು ರಾಜಾ ರವಿವರ್ಮ ಅವರ ವಿಶಿಷ್ಟ ಶೈಲಿಯನ್ನು ಪ್ರತಿಬಿಂಬಿಸುತ್ತದೆ.
➤
ರಾಜಾ ರವಿವರ್ಮ (1848–1906) ಅವರು ಭಾರತೀಯ ಸಂಪ್ರದಾಯ ಮತ್ತು ಪಾಶ್ಚಿಮಾತ್ಯ ತೈಲಚಿತ್ರ ಕಲೆಯ ಸಮ್ಮಿಶ್ರಣಕ್ಕೆ ಹೆಸರಾದವರು. ಇವರು ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಪಾತ್ರಗಳಿಗೆ ದೃಶ್ಯ ರೂಪ ನೀಡಿದರು. ಇವರ ಲಿಥೋಗ್ರಾಫಿಕ್ ಪ್ರೆಸ್ ಮೂಲಕ ತಯಾರಾದ ದೇವರುಗಳ ಚಿತ್ರಗಳು ಭಾರತದ ಪ್ರತಿಯೊಂದು ಮನೆಯನ್ನು ತಲುಪಿದವು. ಈ ಕಾರಣಕ್ಕಾಗಿಯೇ ಇವರನ್ನು 'ಜನಸಾಮಾನ್ಯರ ಕಲಾಕಾರ' ಎಂದು ಕರೆಯಲಾಗುತ್ತದೆ.
➤
ರಾಜಾ ರವಿವರ್ಮ
ಅವರ ಕೊಡುಗೆ ಮತ್ತು ಅವರ ಶೈಲಿಯನ್ನು 'ಅಕಾಡೆಮಿಕ್ ರಿಯಲಿಸಂ' (Academic Realism) ಎಂದು ಕರೆಯಲಾಗುತ್ತದೆ.ಬ್ರಿಟಿಷ್ ಸರ್ಕಾರವು ಇವರಿಗೆ 'ಕೇಸರ್-ಇ-ಹಿಂದ್' (Kaiser-i-Hind) ಚಿನ್ನದ ಪದಕವನ್ನು ನೀಡಿ ಗೌರವಿಸಿತ್ತು. ಪ್ರಸಿದ್ಧ ಕಲಾಕೃತಿಗಳು: ಶಾಕುಂತಲ, ದಮಯಂತಿ ಮತ್ತು ಹಂಸ, ಜಟಾಯು ವಧೆ, ನಾಯರ್ ಲೇಡಿ ಇತ್ಯಾದಿ.
Take Quiz
Loading...