* ಅಪರ್ಣಾ ಗರ್ಗ್, ಐಆರ್‌ಎಎಸ್ 1987 ಬ್ಯಾಚ್ ಅಧಿಕಾರಿ, 2025 ಡಿಸೆಂಬರ್ 1ರಂದು ರೈಲ್ವೆ ಮಂಡಳಿಯ ಸದಸ್ಯೆ (ಹಣಕಾಸು) ಹುದ್ದೆಗೇರಿದರು. ನಾಲ್ಕು ದಶಕಗಳ ನಿರ್ವಹಣಾ ಮತ್ತು ಸಾರ್ವಜನಿಕ ಹಣಕಾಸು ಪರಿಣತಿ ಹೊಂದಿರುವ ಅವರು DRM ಮೈಸೂರು, ಪ್ರಧಾನ ಹಣಕಾಸು ಸಲಹೆಗಾರ ಹಾಗೂ IRIFM ನ ಡೈರೆಕ್ಟರ್ ಜನರಲ್ ಹಂತದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.* ಚೆವೆನಿಂಗ್ ಫೆಲೋ ಆಗಿರುವ ಅವರು ಲೀಡ್ಸ್ ವಿಶ್ವವಿದ್ಯಾಲಯದಿಂದ ಸಾರಿಗೆ ಅರ್ಥಶಾಸ್ತ್ರದಲ್ಲಿ ಮೇಲುಸ್ತರ ಪದವಿ ಪಡೆದಿದ್ದು, ಬೊಕೊನಿ, INSEAD ಮತ್ತು ISBಗಳಲ್ಲಿ ವಿಶೇಷ ಕಾರ್ಯನಿರ್ವಾಹಕ ತರಬೇತಿ ಪಡೆದಿದ್ದಾರೆ.* ಹೊಸ ಹುದ್ದೆಯಲ್ಲಿ ಅವರು ರೈಲ್ವೆಯ ಬಜೆಟ್ ರೂಪಣೆ, ಹೂಡಿಕೆ ನೀತಿ ನಿರ್ಧಾರ, ಸಂಪನ್ಮೂಲ ಸಂಗ್ರಹಣೆ ಮತ್ತು ವಿಕ್ಷಿತ್ ಭಾರತ್ 2047 ಗುರಿಗಳಿಗೆ ಹೊಂದುವಂತೆ ಹಣಕಾಸು ತಂತ್ರ ರೂಪಿಸುವ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.