* ಭಾರತದಲ್ಲಿ ರೈಲ್ವೆ ಹಳಿಗಳ ಮಧ್ಯೆ ಸೋಲಾರ್ ಪ್ಯಾನಲ್ ಅಳವಡಿಸುವ ಪ್ರಯೋಗ ನಡೆದಿದೆ. ವಾರಾಣಸಿಯಲ್ಲಿ ಬನಾರಸ್ ಲೋಕೋಮೋಟಿವ್ ವರ್ಕ್ಸ್ (ಬಿಎಲ್ಡಬ್ಲ್ಯು) ವಾರಾಣಸಿಯಲ್ಲಿ ರೈಲ್ವೆ ಟ್ರ್ಯಾಕ್ಗಳ ಮಧ್ಯೆ ಸೋಲಾರ್ ಪ್ಯಾನಲ್ ಸಿಸ್ಟಂ ಅಳವಡಿಸಿದೆ.* ಭಾರತೀಯ ರೈಲ್ವೇಸ್ (Indian Railways) ಸದ್ಯ 70 ಮೀಟರ್ ಟ್ರ್ಯಾಕ್ನಲ್ಲಿ ಈ ಪ್ರಯೋಗ ನಡೆಸಿದೆ. ಈ 70 ಮೀಟರ್ ದೂರದ ಹಳಿಯಲ್ಲಿ 28 ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಿದೆ. ಇದರಲ್ಲಿ 15 KWp ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಇರುತ್ತದೆ.* ಭಾರತದಲ್ಲಿ ಇಂಥದ್ದೊಂದು ಪ್ರಯೋಗ ನಡೆದಿರುವುದು ಇದೇ ಮೊದಲು. ಈ ಸೋಲಾರ್ ಪ್ಯಾನಲ್ಗಳನ್ನು ತೆಗೆದು ಮತ್ತು ಹಾಕುವ ರೀತಿಯಲ್ಲಿ ನಿರ್ಮಿಸಲಾಗಿದೆ. ಟ್ರ್ಯಾಕ್ ಮೈಂಟೆನೆನ್ಸ್ ವೇಳೆ ಸೋಲಾರ್ ಪ್ಯಾನಲ್ಗಳನ್ನು ತೆಗೆಯಬಹುದು.* ರೈಲ್ವೆ ಹಳಿಗಳನ್ನು ಸೋಲಾರ್ ವಿದ್ಯುತ್ ಉತ್ಪಾದನೆಗೆ ಬಳಸುವ ಪ್ರಯೋಗ ಈಗೀಗ ನಡೆಯುತ್ತಿದೆ. ಇಟಲಿಯಲ್ಲಿ ಒಂದು ರೈಲು ಮಾರ್ಗದಲ್ಲಿ ಸೋಲಾರ್ ಪ್ಯಾನಲ್ ಹಾಕಲಾಗಿದೆ. ಇದೂ ಕೂಡ ಇನ್ನೂ ಪರೀಕ್ಷಾ ಹಂತದಲ್ಲಿದೆ.* ಬ್ರಿಟನ್ ದೇಶದಲ್ಲಿ ರೈಲುಗಳಿಗೆ ಸೌರ ವಿದ್ಯುತ್ ಬಳಸಲಾಗುತ್ತಿದೆಯಾದರೂ ಅದಕ್ಕಾಗಿ ಸೌರಫಲಕಗಳನ್ನು ರೈಲು ಹಳಿಗಳಲ್ಲಿ ಹಾಕಲಾಗಿಲ್ಲ. ಬೇರೆಡೆ ಸೋಲಾರ್ ಫಾರ್ಮ್ಗಳನ್ನು ಮಾಡಿ ಅದರಿಂದ ವಿದ್ಯುತ್ ಪಡೆಯಲಾಗುತ್ತಿದೆ.* ಭಾರತದ ರೀತಿಯಲ್ಲಿ ಸ್ವಿಟ್ಜರ್ಲ್ಯಾಂಡ್ನಲ್ಲಿ 100 ಮೀಟರ್ ರೈಲು ಹಳಿಗಳ ಮಧ್ಯೆ ಸೋಲಾರ್ ಪ್ಯಾನಲ್ಗಳನ್ನು ಪ್ರಯೋಗಾರ್ಥವಾಗಿ ಹಾಕಲಾಗಿದೆ.* ಭಾರತೀಯ ರೈಲ್ವೆ ಸಂಪೂರ್ಣ ಇಂಗಾಲ ಮುಕ್ತ ಆಗಬೇಕು ಎನ್ನುವ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಹಳಿಗಳ ಮಧ್ಯೆ ಸೋಲಾರ್ ಪ್ಯಾನಲ್ ಹಾಕುವ ಕಾರ್ಯವು ಮಹತ್ವದ ಹೆಜ್ಜೆ ಎನಿಸಿದೆ.* ಈ ರೀತಿ ಹಳಿಗಳ ಮಧ್ಯೆ ಸೋಲಾರ್ ಪ್ಯಾನಲ್ ಅಳವಡಿಸಿದರೆ ಒಂದು ವರ್ಷದಲ್ಲಿ ಒಂದು ಕಿಮೀಗೆ 3.21 ಲಕ್ಷ ಯುನಿಟ್ಗಳಷ್ಟು ವಿದ್ಯುತ್ ಉತ್ಪಾದನೆ ಸಾಧ್ಯ ಎಂದು ಅಂದಾಜಿಸಲಾಗಿದೆ.* ಭಾರತೀಯ ರೈಲ್ವೇಸ್ ದೇಶಾದ್ಯಂತ 1.2 ಲಕ್ಷ ಕಿಮೀ ರೈಲು ಜಾಲ ಹೊಂದಿದೆ. ಇಲ್ಲೆಲ್ಲಾ ಸೋಲಾರ್ ಪ್ಯಾನಲ್ ಅಳವಡಿಸಿದರೆ ವರ್ಷದಲ್ಲಿ 38 ಟಿಡಬ್ಲ್ಯುಎಚ್ ಸೋಲಾರ್ ಪವರ್ ಪಡೆಯಲು ಸಾಧ್ಯ.* ಭಾರತೀಯ ರೈಲ್ವೆಗೆ ಅಗತ್ಯವಾದ ವಿದ್ಯುತ್ಗಿಂತ ಕನಿಷ್ಠ ಎರಡು ಪಟ್ಟು ಹೆಚ್ಚು ವಿದ್ಯುತ್ ಅನ್ನು ತಯಾರಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ರೈಲ್ವೇಸ್ ಪೂರ್ಣವಾಗಿ ವಿದ್ಯುತ್ ಸ್ವಾವಲಂಬನೆ ಸಾಧಿಸಲು ಅವಕಾಶ ಇದೆ.