* ಇನ್ನುಮುಂದೆ ರೈಲಿನಲ್ಲಿ ಎಟಿಎಂ ಮೂಲಕ ಹಣ ಪಡೆಯುವ ಸೌಲಭ್ಯ ಲಭ್ಯವಿದೆ. ಭಾರತೀಯ ರೈಲ್ವೆಯ 172ನೇ ವರ್ಷಾಚರಣೆಯ ಅಂಗವಾಗಿ ಪ್ರಾಯೋಗಿಕ ಹಂತದಲ್ಲಿ ರೈಲಿನಲ್ಲಿ ಎಟಿಎಂ ಯಂತ್ರವನ್ನು ಸ್ಥಾಪಿಸಲಾಗಿದೆ.* ಮುಂಬೈ–ಮನಮಾಡ್ ಪಂಚವಟಿ ಎಕ್ಸ್ಪ್ರೆಸ್ನಲ್ಲಿ ಮೊದಲಬಾರಿಗೆ ಪ್ರಾಯೋಗಿಕವಾಗಿ ಎಟಿಎಂ ಯಂತ್ರ ಅಳವಡಿಸಲಾಗಿದೆ. ಈ ಹೊಸ ಪ್ರಯತ್ನಕ್ಕೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ.* ಎಟಿಎಂ ಯಂತ್ರವನ್ನು ಕೇಂದ್ರ ರೈಲ್ವೆಯ ಮುಂಬೈ ಪ್ರಧಾನ ಕಚೇರಿ, ಭುಸವಾಲ್ ವಿಭಾಗ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ ಈ ಮೂರು ಸಂಸ್ಥೆಗಳ ಸಹಯೋಗದಲ್ಲಿ ಸ್ಥಾಪಿಸಿವೆ.* ರೈಲಿನಲ್ಲಿ ಎಟಿಎಂ ಇರುವ ದೃಶ್ಯವೊಂದನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ರೈಲಿನಲ್ಲಿ ಮೊದಲ ಬಾರಿಗೆ ಎಟಿಎಂ ಸೌಲಭ್ಯ’ ಎಂದು ಅವರು ತಿಳಿಸಿದ್ದಾರೆ.* ಭಾರತೀಯ ರೈಲ್ವೆ ಹೇಳುವ ಪ್ರಕಾರ, ಈ ಪ್ರಯೋಗ ಯಶಸ್ವಿಯಾದರೆ ದೇಶದ ಮತ್ತಷ್ಟು ರೈಲುಗಳಲ್ಲಿ ಎಟಿಎಂ ಯಂತ್ರಗಳನ್ನು ಅಳವಡಿಸಲಾಗುವುದು.* 1853ರಲ್ಲಿ ಕೇವಲ 34 ಕಿ.ಮೀ ದೂರದ ರೈಲು ಪ್ರಯಾಣವಾಗಿ ಆರಂಭವಾದ ಭಾರತೀಯ ರೈಲ್ವೆ ಇಂದು ವಿಶ್ವದ ಅತಿದೊಡ್ಡ ರೈಲು ಜಾಲವನ್ನೇ ರೂಪಿಸಿಕೊಂಡಿದೆ. ಇದೇ ಹೆಮ್ಮೆಯೊಂದಿಗೆ ಭಾರತೀಯ ರೈಲ್ವೆ ಮುಂದಿನತ್ತ ಹೆಜ್ಜೆ ಹಾಕುತ್ತಿದೆ.