* ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC), ಸಹಕಾರ ಸಚಿವಾಲಯದ ನಿಯಂತ್ರಣದಲ್ಲಿರುವ ಸಂಸ್ಥೆ, 'ಸಹಕಾರ ಮಿತ್ರ' ಇಂಟರ್ನ್ಶಿಪ್ ಯೋಜನೆಯನ್ನು ಆರಂಭಿಸಿದೆ.ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ :* ವೃತ್ತಿಪರ ಪದವೀಧರರಿಗೆ ಎನ್.ಸಿಡಿಸಿ ಆಳವಾದ ಅನುಭವದ ಅವಕಾಶ ಒದಗಿಸುತ್ತದೆ.• ಸಂದರ್ಭವನ್ನು ತಿಳಿಯಲು, ಪ್ರಾಕ್ಟಿಕಲ್ ಕೆಲಸವನ್ನು ಕಲಿಯಲು ನೆರವಾಗುವುದು.• ಸಹಕಾರಿ ವ್ಯವಹಾರಗಳಿಗೆ ಗಮನ ಕೇಂದ್ರೀಕರಿಸುವಂತೆ, ಸ್ಟಾರ್ಟಪ್ ಸಹಕಾರಿಗಳಲ್ಲಿ ವ್ಯಸ್ತರಾಗುವಂತೆ ಮಾಡುವುದು.• ಸಹಕಾರಿ ಕಾನೂನುಗಳ ಅಡಿಯಲ್ಲಿ ಸಂಘಟಿತವಾದ ಎಫ್ ಪಿಒಗಳಲ್ಲಿ ನಾಯಕತ್ವ/ಉದ್ಯಮಿ ಪಾತ್ರವನ್ನು ನಿಭಾಯಿಸಲು ನೆರವಾಗುವುದು.• ಅಗತ್ಯವಿರುವ ಸಹಕಾರಿ ಸಂಸ್ಥೆಗಳಿಗೆ ಬಿಜಿನೆಸ್ ಯೋಜನೆ, ಪ್ರಾಜೆಕ್ಟ್ ಯೋಜನೆ ಮತ್ತು ಪ್ರಾಜೆಕ್ಟ್ಗಳನ್ನು ರೂಪಿಸಲು ನೆರವಾಗುವುದು.* ಸಹಕಾರ ಮಿತ್ರ ಇಂಟರ್ನ್ಶಿಪ್ ಯೋಜನೆ ಯುವ ವೃತ್ತಿಪರರಿಗೆ ರೈತ ಉತ್ಪಾದಕ ಸಂಸ್ಥೆಗಳಲ್ಲಿ ನಾಯಕತ್ವ ಮತ್ತು ಔದ್ಯೋಗಿಕ ಪಾತ್ರಗಳಿಗೆ ತರಬೇತಿ ನೀಡುವ ಮೂಲಕ ಸಹಕಾರಿ ವಲಯದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.* ಯುವ ವೃತ್ತಿಪರರ ಆವಿಷ್ಕಾರಕ ಚಿಂತನೆಗಳಿಂದ ಸಹಕಾರಿ ಸಂಸ್ಥೆಗಳು ಲಾಭ ಪಡೆದು ದೇಶದ ಆರ್ಥಿಕ ಅಭಿವೃದ್ಧಿಗೆ ಬೆಂಬಲ ನೀಡುವುದು ಸಹಕಾರ ಮಿತ್ರ ಇಂಟರ್ನ್ ಶಿಪ್ ಯೋಜನೆಯ ಗುರಿಯಾಗಿದೆ.ಆಯ್ಕೆ ಪ್ರಕ್ರಿಯೆ* ಇಂಟರ್ನ್ಗಳ ಆಯ್ಕೆಯು ಅಭ್ಯರ್ಥಿಗಳ ಬಯೋಡೇಟಾ, ಹಾಗೂ ಪ್ರಾಯೋಜಕ ಸಂಸ್ಥೆಗಳ ಶಿಫಾರಸನ್ನು ಅವಲಂಬಿಸಿರುತ್ತದೆ.* ಕೃಷಿ, ಡೇರಿ, ಪನು ಸಂಗೋಪನೆ, ಪಶು ಮೀನುಗಾರಿಕೆ, ತೋಟ ಗಾರಿಕೆ, ಜವಳಿ, ಕೈಮಗ್ಗ ಅಥವಾ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿಪರ ಶೈಕ್ಷಣಿಕ ಅರ್ಹತೆಯಿರುವ ವ್ಯಕ್ತಿಗಳು ಸಹಕಾರ ಮಿತ್ರ ಇಂಟರ್ನ್ ಶಿಪ್ ಯೋಜನೆಗೆ ಅರ್ಹರಾಗಿರುತ್ತಾರೆ.* ಅಗ್ರಿ ಬಿಜಿನೆಸ್, ಸಹಕಾರಿ ಆಡಳಿತ, ಎಂ.ಕಾಂ., ಎಂಸಿಎ, ಹಣಕಾಸು, ಅಂತಾರಾಷ್ಟ್ರೀಯ ವಾಣಿಜ್ಯ, ಅರಣ್ಯ, ಗ್ರಾಮೀಣ ಅಭಿವೃದ್ಧಿ ಅಥವಾ ಪ್ರಾಜೆಕ್ಟ್ ಮ್ಯಾನೆಜ್ಮೆಂಟ್ನಲ್ಲಿ ಎಂಬಿಎ ಮಾಡಿರುವವರು ಅರ್ಹರಾಗಿರುತ್ತಾರೆ.* ಅರ್ಹತೆ ಇರುವವರನ್ನು ಕೂಡ ಪರಿಗಣಿಸಲಾಗುತ್ತದೆ. ಎಲ್ಲ ಅರ್ಜಿದಾರರ ಶೈಕ್ಷಣಿಕ ಅರ್ಹತೆಗಳು ಯುಜಿಸಿ/ಎಐಸಿಟಿಇ/ಐಸಿಎಆರ್ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಅಥವಾ ಸಂಸ್ಥೆಗಳ ಮುಖ್ಯಸ್ಥರಿಂದ ಮಾನ್ಯತೆ ಪಡೆದಿರಬೇಕು.