* ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಬಹುಚರ್ಚಿತ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಗೆ ಅಂಕಿತ ಹಾಕಿದ್ದು, ಈಗ ಅದು ಕಾನೂನಾಗಿದೆ. ಇದರಿಂದ 2011ರಿಂದ ಜಾರಿಯಲ್ಲಿದ್ದ ಕ್ರೀಡಾ ಸಂಹಿತೆಯನ್ನು ಬದಲಿಸಿ ಹೊಸ ಕ್ರೀಡಾ ಆಡಳಿತ ಕಾಯ್ದೆ ಜಾರಿಗೆ ಬಂದಿದೆ.* ಕಾಯ್ದೆಯಡಿ ರಾಷ್ಟ್ರೀಯ ಕ್ರೀಡಾ ಮಂಡಳಿ (NSB), ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ (NST) ಮತ್ತು ಕ್ರೀಡಾ ಚುನಾವಣಾ ಪ್ಯಾನೆಲ್ ಸ್ಥಾಪನೆಗೊಳ್ಳಲಿದೆ.- NSB: ಎಲ್ಲಾ ಕ್ರೀಡಾ ಫೆಡರೇಷನ್ಗಳ ಮೇಲ್ವಿಚಾರಣೆ- NST: ಆಯ್ಕೆ, ಚುನಾವಣಾ ವಿವಾದ, ಹಣಕಾಸು-ಆಡಳಿತ ದುರುಪಯೋಗ ವಿಚಾರಣೆ (ಸುಪ್ರೀಂ ಕೋರ್ಟ್ ಹೊರತುಪಡಿಸಿ ಮೇಲ್ಮನವಿ ಇಲ್ಲ)* ಹೊಸ ಕಾಯ್ದೆ ಪ್ರಕಾರ ಬಿಸಿಸಿಐ NSB ಅಡಿಯಲ್ಲಿ ಬರುತ್ತದೆ. ಆದರೆ ಸರ್ಕಾರದಿಂದ ನಿಧಿ ಪಡೆಯದ ಕಾರಣ ಅದು ಆರ್ಟಿಐ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರದಿಂದ ನಿಧಿ ಪಡೆಯುವ ಇತರ ಫೆಡರೇಷನ್ಗಳಿಗೆ ಮಾತ್ರ ಆರ್ಟಿಐ ಅನ್ವಯಿಸುತ್ತದೆ.* ಹಿಂದಿನ ನಿಯಮ ಪ್ರಕಾರ 2 ಅವಧಿಗೆ ಸದಸ್ಯರಾಗಿದ್ದವರಿಗೆ ಮಾತ್ರ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ ಸ್ಥಾನಗಳಿಗೆ ಸ್ಪರ್ಧಿಸಲು ಅವಕಾಶವಿತ್ತು. ಹೊಸ ಕಾಯ್ದೆಯಲ್ಲಿ ಸಡಿಲಿಕೆ ನೀಡಿ, ಒಮ್ಮೆ ಸದಸ್ಯರಾದರೂ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.