* 5 ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳು 2023 ರಲ್ಲಿ ಅತ್ಯುತ್ತಮ ರಾಜ್ಯ ವಿಭಾಗದಲ್ಲಿ ಒಡಿಶಾ ಪ್ರಥಮ ಬಹುಮಾನವನ್ನು ಗೆದ್ದಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವ ಸಿಆರ್ ಪಾಟೀಲ್ ಅವರು ಅಕ್ಟೋಬರ್ 14 ರಂದು (ಸೋಮವಾರ) ನವದೆಹಲಿಯಲ್ಲಿ ಘೋಷಣೆ ಮಾಡಿದರು.* ಈ ಪ್ರಶಸ್ತಿಯ ವಿವಿಧ ವಿಭಾಗಗಳಲ್ಲಿ ರಾಜ್ಯವು ಇತರ ಮೂರು ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದೆ.* ಉತ್ತರ ಪ್ರದೇಶ ದ್ವಿತೀಯ ಸ್ಥಾನ ಪಡೆದರೆ, ಗುಜರಾತ್ ಮತ್ತು ಪುದುಚೇರಿ ಜಂಟಿಯಾಗಿ ಮೂರನೇ ಸ್ಥಾನ ಗಳಿಸಿವೆ.* ಜಲಪುರಸ್ಕಾರದ 'ಅತ್ಯುತ್ತಮ ನಾಗರಿಕ ಸಮಾಜ' ಎಂಬ ವಿಭಾಗದಲ್ಲಿ, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ವ್ಯಕ್ತಿ ವಿಕಾಸ ಕೇಂದ್ರ 'ವಿಶೇಷ ಉಲ್ಲೇಖ ಪುರಸ್ಕಾರ ಪಡೆದಿದೆ. * ಅತ್ಯುತ್ತಮ ನೀರು ಬಳಕೆದಾರ ಸಂಘ' ವಿಭಾಗದಲ್ಲಿ ಶಿವಮೊಗ್ಗದ ಕಾಗೆಕೋಡಮಗ್ಗೆಯ ನೀರು ಬಳಕೆದಾರರ ಸಹಕಾರ ಸೊಸೈಟಿ ಎರಡನೇ ಸ್ಥಾನ ಪಡೆದಕೊಂಡಿದೆ.* ಜಲಶಕ್ತಿ ಸಚಿವ ಸಿ ಆರ್ ಪಾಟೀಲ್ ಫಲಿತಾಂಶ ಪ್ರಕಟಿಸಿದರು. ಅಕ್ಟೋಬರ್ 22 ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ವಹಿಸಲಿದ್ದಾರೆ.* ನೀರಿನ ಸಂರಕ್ಷಣೆಯಲ್ಲಿ ಒಡಿಶಾದ ಗಮನಾರ್ಹ ಸಾಧನೆಗಳಲ್ಲಿ 53,000 ಕ್ಕೂ ಹೆಚ್ಚು ನೀರಿನ ಸಂರಕ್ಷಣೆ ಮತ್ತು ಮಳೆನೀರು ಕೊಯ್ಲು ರಚನೆಗಳ ನಿರ್ಮಾಣ ಮತ್ತು 11,000 ಸಾಂಪ್ರದಾಯಿಕ ಜಲಮೂಲಗಳ ನವೀಕರಣ ಸೇರಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.* ಹೆಚ್ಚುವರಿಯಾಗಿ 21,000 ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಯಿತು, 90,900 ಹೆಕ್ಟೇರ್ ನೀರಾವರಿ ಭೂಮಿಯನ್ನು ಸೂಕ್ಷ್ಮ ನೀರಾವರಿ ವ್ಯವಸ್ಥೆಗಳಾಗಿ ಪರಿವರ್ತಿಸಲಾಯಿತು, 87,000 ರೈತರಿಗೆ ಪ್ರಯೋಜನವಾಯಿತು. * ಉತ್ತರ ಪ್ರದೇಶವು ಎರಡನೇ ಸ್ಥಾನದಲ್ಲಿದೆ, ಜಲ ಜೀವನ್ ಮಿಷನ್ ಅಡಿಯಲ್ಲಿ ಅದರ ಪ್ರಯತ್ನಗಳಿಗಾಗಿ ಶ್ಲಾಘಿಸಲಾಯಿತು, ಹಾಗೂ 17,900 ಕ್ಕೂ ಹೆಚ್ಚು ಹಳ್ಳಿಗಳಿಗೆ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ, 1.91 ಕೋಟಿ ಮನೆಗಳಿಗೆ ಪ್ರಯೋಜನವನ್ನು ನೀಡಿತು.