Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ರಾಷ್ಟ್ರೀಯ ಜೇನು ಸಾಕಾಣೆ ಮತ್ತು ಜೇನುತುಪ್ಪ
5 ನವೆಂಬರ್ 2025
* ಭಾರತ ಸರ್ಕಾರವು
2021ರಲ್ಲಿ "ಸಿಹಿ ಕ್ರಾಂತಿ" (Sweet Revolution)
ಯ ಭಾಗವಾಗಿ
ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನುತುಪ್ಪ ಮಿಷನ್ (NBHM)
ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯ ಉದ್ದೇಶ, ದೇಶದಲ್ಲಿ ಜೇನುಸಾಕಣೆಯ ಆಧುನಿಕೀಕರಣ ಮತ್ತು ಜೇನುತುಪ್ಪ ಉತ್ಪಾದನೆಯನ್ನು ಗುಣಮಟ್ಟದ ಮಟ್ಟದಲ್ಲಿಗೆ ಏರಿಸುವುದಾಗಿದೆ.
* ಈ ಮಿಷನ್ನ್ನು
ರಾಷ್ಟ್ರೀಯ ಜೇನುನೊಣ ಮಂಡಳಿ (National Bee Board – NNB)
ಕಾರ್ಯಗತಗೊಳಿಸುತ್ತಿದ್ದು, ಜೇನುಸಾಕಣೆಗಾರರಿಗೆ ಆರ್ಥಿಕ ಸಹಾಯ, ತರಬೇತಿ ಹಾಗೂ ಯಂತ್ರೋಪಕರಣಗಳ ಸೌಲಭ್ಯ ಒದಗಿಸುತ್ತದೆ.
* ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನುತುಪ್ಪ ಮಿಷನ್ (NBHM) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ದೇಶದಲ್ಲಿ
ವೈಜ್ಞಾನಿಕ ಜೇನುಸಾಕಣೆ
ಯ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ
'ಸಿಹಿ ಕ್ರಾಂತಿ'
ಯನ್ನು (Sweet Revolution) ತರುವ ಗುರಿಯನ್ನು ಹೊಂದಿದೆ. ಇದು ಪ್ರಧಾನಮಂತ್ರಿಗಳ
'ಆತ್ಮನಿರ್ಭರ ಭಾರತ ಅಭಿಯಾನ'
ದ ಒಂದು ಭಾಗವಾಗಿದೆ.
* ಈ ಮಿಷನ್ನಡಿ
Blockchain
,
IT tools
ಬಳಸಿ ಜೇನುತುಪ್ಪದ ನಿಖರ ಮೂಲ, ಗುಣಮಟ್ಟ ಮತ್ತು ಪತ್ತೆಹಚ್ಚುವಿಕೆ ವ್ಯವಸ್ಥೆ (Traceability system) ಅಳವಡಿಸಲಾಗುತ್ತದೆ. ಇದರಿಂದ ವಂಚನೆ, ಮಿಶ್ರಣ ಮತ್ತು ದುರುಪಯೋಗವನ್ನು ತಡೆಯಲಾಗುತ್ತದೆ.
* ಭಾರತವು ಜೇನುತುಪ್ಪ ರಫ್ತುದಾರ ರಾಷ್ಟ್ರಗಳ ಪಟ್ಟಿಯಲ್ಲಿ 2020 ರಲ್ಲಿ ಇದ್ದ
9ನೇ ಸ್ಥಾನದಿಂದ ಈಗ ವಿಶ್ವದ 2ನೇ ಅತಿದೊಡ್ಡ ರಫ್ತುದಾರ
ನಾಗಿ ಹೊರಹೊಮ್ಮಿದೆ. ಜೇನುತುಪ್ಪ ಮತ್ತು ಇತರ ಜೇನು ಉತ್ಪನ್ನಗಳ ಮೂಲದ ಆನ್ಲೈನ್ ನೋಂದಣಿ ಮತ್ತು
ಪತ್ತೆಹಚ್ಚುವಿಕೆ (Traceability)
ಗಾಗಿ
'ಮಧು ಕ್ರಾಂತಿ ಪೋರ್ಟಲ್'
ಅನ್ನು ಪ್ರಾರಂಭಿಸಲಾಗಿದೆ.
NBHM ಒಂದು ಪರಿವರ್ತಕ ಯೋಜನೆ. ಇದು ಜೇನುಸಾಕಣೆಗಾರರಿಗೆ ಲಾಭ, ಪರಿಸರಕ್ಕೆ ಸಮತೋಲನ, ಕೃಷಿಗೆ ಉತ್ಪಾದಕತೆ ಹಾಗೂ ದೇಶಕ್ಕೆ ಆರ್ಥಿಕ ವೃದ್ಧಿಯನ್ನು ಒಟ್ಟಾಗಿ ನೀಡುವ ಬಹುಮುಖ ಮಿಷನ್
Take Quiz
Loading...