* ದೂರಸಂಪರ್ಕ ಇಲಾಖೆ (DoT) ತನ್ನ 'ಸಂಚಾರ ಮಿತ್ರ ಯೋಜನೆ'ಯನ್ನು ಈಗ ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತಂದಿದೆ. ಪ್ರಾರಂಭದಲ್ಲಿ ಕೆಲ ಆಯ್ದ ಸಂಸ್ಥೆಗಳಲ್ಲಿ ಪೈಲಟ್ ಯೋಜನೆ ರೂಪದಲ್ಲಿ ಆರಂಭಗೊಂಡಿದ್ದ ಇದರ ಉದ್ದೇಶ, ಯುವಕರನ್ನು ಡಿಜಿಟಲ್ ರಾಯಭಾರಿಗಳಾಗಿ ಸಬಲೀಕರಣಗೊಳಿಸುವುದಾಗಿದೆ.* ಈ ಯೋಜನೆಯಡಿ, ಸಂಚಾರ್ ಮಿತ್ರಸ್ ಎಂಬ ವಿದ್ಯಾರ್ಥಿ ಸ್ವಯಂಸೇವಕರು ಡಿಜಿಟಲ್ ಸುರಕ್ಷತೆ, ಸೈಬರ್ ವಂಚನೆ ತಡೆ, ಇಎಂಎಫ್ ವಿಕಿರಣ ಹಾಗೂ ಜವಾಬ್ದಾರಿಯುತ ಮೊಬೈಲ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ತೊಡಗಿಸಿಕೊಳ್ಳುತ್ತಾರೆ.* ಅವರಿಗೆ NCA-T ಮತ್ತು DoT ತರಬೇತಿ ನೀಡುತ್ತದೆ, 5G, 6G, AI ಮತ್ತು ಸೈಬರ್ ಭದ್ರತೆ ಕುರಿತು ಅರಿವು ನೀಡಲಾಗುತ್ತದೆ.* ಸ್ವಯಂಸೇವಕರಾಗಿ ಟೆಲಿಕಾಂ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ ಹಾಗೂ ಸೈಬರ್ ಭದ್ರತಾ ಹಿನ್ನಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಸ್ಥಳೀಯ DoT ಕಚೇರಿಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.* ಅವರು ಸಮುದಾಯ ಸಂಪರ್ಕ, ಎನ್ಜಿಒಗಳೊಂದಿಗೆ ಕೆಲಸ ಹಾಗೂ ಸುರಕ್ಷಿತ ಡಿಜಿಟಲ್ ಅಭ್ಯಾಸಗಳನ್ನು ಉತ್ತೇಜಿಸುತ್ತಾರೆ.* ಅತ್ಯುತ್ತಮ ಸಂಚಾರ್ ಮಿತ್ರಸ್ಗಳಿಗೆ ಇಂಟರ್ನ್ಷಿಪ್, ಪ್ರಮುಖ ಕಾರ್ಯಕ್ರಮಗಳಲ್ಲಿ ಪ್ರಾತಿನಿಧ್ಯ ಮತ್ತು ಪ್ರೋತ್ಸಾಹ ದೊರೆಯಲಿದೆ. ಗುವಾಹಟಿಯಲ್ಲಿ ನಡೆದ ಮೊದಲ ಬೃಹತ್ ಕಾರ್ಯಕ್ರಮದಲ್ಲಿ ಐಐಟಿ, ಎನ್ಐಟಿ, ಐಐಐಟಿ ಸೇರಿ 18 ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.* ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ಕಾರ್ಯಕ್ರಮಕ್ಕೆ ರಾಷ್ಟ್ರವ್ಯಾಪಿ ಚಾಲನೆ ನೀಡಿದರು. ಅವರು ಇದನ್ನು ಭಾರತವನ್ನು ಡಿಜಿಟಲ್ ಪ್ರಜಾಪ್ರಭುತ್ವದತ್ತ ಮುನ್ನಡೆಸುವ ಹೆಜ್ಜೆ ಎಂದು ವರ್ಣಿಸಿದರು.