Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ (National Girl Child Day)
Authored by:
Heena Sheregar
Date:
24 ಜನವರಿ 2026
➤ ಭಾರತದಲ್ಲಿ ಪ್ರತಿವರ್ಷ ಜನವರಿ 24 ರಂದು 'ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ'ವನ್ನು ಆಚರಿಸಲಾಗುತ್ತದೆ.
ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ, ಲಿಂಗ ತಾರತಮ್ಯ ಮತ್ತು ದೌರ್ಜನ್ಯಗಳ ವಿರುದ್ಧ ಜಾಗೃತಿ ಮೂಡಿಸಿ, ಅವರ ಹಕ್ಕುಗಳನ್ನು ರಕ್ಷಿಸುವುದು ಈ ದಿನದ ಆಶಯವಾಗಿದೆ. 2008ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮೊದಲ ಬಾರಿಗೆ ಈ ದಿನವನ್ನು ಆಚರಿಸಲು ನಿರ್ಧರಿಸಿತು. 1966ರ ಜನವರಿ 24 ರಂದು
ಇಂದಿರಾ ಗಾಂಧಿಯವರು
ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆ ಸವಿನೆನಪಿಗಾಗಿ ಮತ್ತು ಮಹಿಳಾ ಸಬಲೀಕರಣದ ಸಂಕೇತವಾಗಿ ಈ ದಿನಾಂಕವನ್ನು ಆಯ್ದುಕೊಳ್ಳಲಾಗಿದೆ.
➤
ಆಚರಣೆಯ ಪ್ರಮುಖ ಉದ್ದೇಶಗಳು:-
=>
ಲಿಂಗ ಸಮಾನತೆ:
ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಎಂಬ ತಾರತಮ್ಯವನ್ನು ಹೋಗಲಾಡಿಸುವುದು.
=>
ಭ್ರೂಣ ಹತ್ಯೆ ತಡೆ:
ಹೆಣ್ಣು ಭ್ರೂಣ ಹತ್ಯೆಯನ್ನು ನಿಷೇಧಿಸಿ, ಇಳಿಮುಖವಾಗುತ್ತಿರುವ ಲಿಂಗಾನುಪಾತವನ್ನು ಸುಧಾರಿಸುವುದು.
=>
ಶಿಕ್ಷಣ ಮತ್ತು ಆರೋಗ್ಯ:
ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ದೊರೆಯುವಂತೆ ಮಾಡುವುದು.
=>
ಸುರಕ್ಷತೆ:
ಮನೆಯ ಒಳಗೆ ಮತ್ತು ಹೊರಗೆ ಹೆಣ್ಣು ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು ಹಾಗೂ ದೌರ್ಜನ್ಯ ತಡೆಗಟ್ಟುವುದು.
➤
ಬಾಲ್ಯ ವಿವಾಹ ಇಳಿಕೆ:
ಭಾರತದಲ್ಲಿ 2006ರಲ್ಲಿ ಶೇ. 47ರಷ್ಟಿದ್ದ ಬಾಲ್ಯ ವಿವಾಹದ ಪ್ರಮಾಣವು 2019-21ರ ವೇಳೆಗೆ
ಶೇ. 23.3
ಕ್ಕೆ ಇಳಿದಿದೆ. ಆದರೂ ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್ನಂತಹ ರಾಜ್ಯಗಳಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಿದೆ.
➤
ಮಹಿಳಾ ಸಾಕ್ಷರತೆ:
2023-24ರ ವರದಿಯಂತೆ ಭಾರತದ ಮಹಿಳಾ ಸಾಕ್ಷರತಾ ಪ್ರಮಾಣ
ಶೇ. 74.6
ಕ್ಕೆ ಏರಿಕೆಯಾಗಿದೆ. ವಿಶೇಷವಾಗಿ 15-24 ವರ್ಷದ ಯುವತಿಯರಲ್ಲಿ ಸಾಕ್ಷರತೆ
ಶೇ. 96
ರಷ್ಟಿರುವುದು ಆಶಾದಾಯಕವಾಗಿದೆ.
ಕೇರಳ ರಾಜ್ಯವು
ಮಹಿಳಾ ಸಾಕ್ಷರತೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ.
➤
ಪ್ರಮುಖ ಸರ್ಕಾರಿ ಯೋಜನೆಗಳು:
ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ:
=>
ಬೇಟಿ ಬಚಾವೋ, ಬೇಟಿ ಪಢಾವೋ:
ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣಕ್ಕಾಗಿ.
=>
ಸುಕನ್ಯಾ ಸಮೃದ್ಧಿ ಯೋಜನೆ:
ಹೆಣ್ಣು ಮಕ್ಕಳ ಭವಿಷ್ಯದ ಉಳಿತಾಯಕ್ಕಾಗಿ.
=>
ಮಾತೃ ವಂದನಾ ಯೋಜನೆ:
ಗರ್ಭಿಣಿಯರು ಮತ್ತು ಬಾಣಂತಿಯರ ಪೌಷ್ಟಿಕಾಂಶಕ್ಕಾಗಿ.
=>
ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯ:
ಗ್ರಾಮೀಣ ಹೆಣ್ಣು ಮಕ್ಕಳ ಶಿಕ್ಷಣ ಉತ್ತೇಜಿಸಲು.
Take Quiz
Loading...