* ಕೇಂದ್ರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ನೀಡುವ 2024ರ "ರಾಷ್ಟ್ರೀಯ ಗೋಪಾಲ್ ರತ್ನ ಪ್ರಶಸ್ತಿ" ಗೆ ಬಿಸನಾಳ ಹಾಲು ಉತ್ಪಾದಕರ ಸಂಘ ಆಯ್ಕೆಯಾಗಿದೆ. * ನವದೆಹಲಿಯಲ್ಲಿ ನವೆಂಬರ್ 26 ರಂದು ರಾಷ್ಟ್ರೀಯ ಹಾಲು ದಿನಾಚರಣೆಯ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಜೀವ್ ರಂಜಾನ್ ಸಿಂಗ್ ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ. ಈ ಪ್ರಶಸ್ತಿಯು ನಗದು 5 ಲಕ್ಷ ಬಹುಮಾನವನ್ನು ಹೊಂದಿದೆ. * 'ಅತ್ಯುತ್ತಮ ಡೇರಿ ಸಹಕಾರ ಸಂಘ'ದ ವಿಭಾಗದಲ್ಲಿ ಬಿಸನಾಳ ಹಾಲು ಉತ್ಪಾದಕರ ಸಂಘಕ್ಕೆ ಪ್ರಥಮ ಸ್ಥಾನ ದೊರತಿದೆ.* ಜೋಪಡಿಯಲ್ಲಿ 1930 ಜ.16ರಂದು 100 ಜನ ಸದಸ್ಯರಿಂದ ಪ್ರತಿದಿನ 10 ಲೀ. ಹಾಲು ಶೇಖರಣೆಯೊಂದಿಗೆ ಪ್ರಾರಂಭವಾದ ಸಂಘವು ಇಂದು ನಿತ್ಯ 2,200 ಲೀ. ಹಾಲು ಸಂಗ್ರಹಣೆ ಮಾಡುತ್ತಿದ್ದು, 200ಕ್ಕೂ ಅಧಿಕ ಸದಸ್ಯರಿದ್ದಾರೆ. ಮಹಾದೇವ ಚಿನಗುಂಡಿ ದಾನವಾಗಿ ನೀಡಿದ ಜಾಗದಲ್ಲಿ 2016ರ ಆಗಸ್ಟ್ 8ರಂದು ನೂತನ ಕಟ್ಟಡಕ್ಕೆ ಸಂಘವು ಸ್ಥಳಾಂತರಗೊಂಡಿದ್ದು, ವಿವಿಧ ಮೂಲಗಳಿಂದ ಸಂಗ್ರಹಿಸಲಾದ ₹16.90 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ.* 2023-24ನೇ ಸಾಲಿಗೆ ₹ 9.56 ಲಕ್ಷ ನಿವ್ವಳ ಲಾಭ ಹೊಂದಿರುವ ಸಂಘದಲ್ಲಿ ನಾಲ್ವರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಲು ಸಂಗ್ರಹಣೆ ಜತೆಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡಿರುವುದು ವಿಶೇಷ. ಕೋವಿಡ್ ವೇಳೆಯಲ್ಲಿ ಹಾಲು ಉತ್ಪಾದಕ ಸದಸ್ಯರಿಗೆ 1 ಲೀ. ಹಾಲಿಗೆ 1 ರೂ ಪ್ರೋತ್ಸಾಹದಂತೆ ₹ 1.53 ಲಕ್ಷ ಹಣ ನೀಡಿದೆ. * ಆಶಾ ಕಾರ್ಯಕರ್ತರಿಗೆ ಗೌರವಧನ ನೀಡಿದೆ. ಶುದ್ಧ ಹಾಲು ಉತ್ಪಾದನೆಯ ಸಲುವಾಗಿ ಎಲ್ಲ ಹಾಲು ಉತ್ಪಾದಕರಿಗೆ ಸಂಘದಿಂದ ₹ 1.29 ಲಕ್ಷ ವೆಚ್ಚದಲ್ಲಿ ಉಚಿತವಾಗಿ ಸ್ಟೀಲ್ ಕ್ಯಾನ್ ವಿತರಿಸಿದೆ.* ರಾಷ್ಟ್ರೀಯ ಸಹಕಾರಿ ಅಭಿವೃದ್ಧಿನಿಗಮ (ಎನ್ಸಿಡಿಸಿ) ದ ಡೇರಿ ವಲಯದ ಅತ್ಯುತ್ತಮ ಪ್ರಾಥಮಿಕ ಸಹಕಾರಿಗಳ ವಿಭಾಗದ ಪ್ರಶಸ್ತಿಯೂ ಬಿಸನಾಳ ಹಾಲು ಉತ್ಪಾದಕರ ಸಂಘಕ್ಕೆ ದೊರಕಿದೆ.* ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ರಾಷ್ಟ್ರೀಯ ಗೋಕುಲ್ ಮಿಷನ್ (RGM) ಅಡಿಯಲ್ಲಿ 2021 ರಿಂದ ಪ್ರತಿ ವರ್ಷ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಯನ್ನು ನೀಡುತ್ತಿದೆ* ವೈಜ್ಞಾನಿಕ ರೀತಿಯಲ್ಲಿ ಸ್ಥಳೀಯ ಗೋವಿನ ತಳಿಗಳನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಭಾರತದಲ್ಲಿ ರಾಷ್ಟ್ರೀಯ ಗೋಕುಲ್ ಮಿಷನ್ಅನ್ನು ಡಿಸೆಂಬರ್ 2014 ರಲ್ಲಿ ಪ್ರಾರಂಭಿಸಲಾಯಿತು ..