Job Description: * ನಟಿ-ರಾಜಕಾರಣಿ ಮತ್ತು ಬಿಜೆಪಿ ನಾಯಕಿ ಖುಷ್ಬು ಸುಂದರ್ ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. * ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯೆ ಖುಷ್ಬು ಅವರು ತಮ್ಮ ನೇಮಕಾತಿಯ ಅಧಿಸೂಚನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ತಮಗೆ ಬಹುದೊಡ್ಡ ಜವಾಬ್ದಾರಿ ನೀಡಿದ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖುಷ್ಬು ಕೃತಜ್ಞತೆ ಸಲ್ಲಿಸಿದ್ದಾರೆ. * ರಾಷ್ಟ್ರೀಯ ಮಹಿಳಾ ಆಯೋಗವನ್ನು ಕಾಯ್ದೆ ಬದ್ಧ ಸಂಸ್ಥೆಗಾಗಿ ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ 1990 (ಭಾರತ ಸರ್ಕಾರದ ಕಾಯ್ದೆ ಸಂಖ್ಯೆ 1990 ರ 20) ರ ಅಡಿಯಲ್ಲಿ ಜನವರಿ 1992 ರಲ್ಲಿ ಸ್ಥಾಪಿಸಲಾಯಿತು. * ರಾಷ್ಟೀಯ ಮಹಿಳಾ ಆಯೋಗದ ಉದ್ದೇಶಗಳು - ಮಹಿಳೆಯರ ಸಂವಿಧಾನಿಕ ಮತ್ತು ನ್ಯಾಯಬದ್ಧ ರಕ್ಷಣೆಗಳ ಪರಿಶೀಲನೆ - ಪರಿಹಾರಿಕ ನ್ಯಾಯ ಕ್ರಮಗಳನ್ನು ಶಿಫಾರಸ್ಸು ಮಾಡುವುದು; - ಕುಂದುಕೊರತೆಗಳ ಪರಿಹಾರವನ್ನು ಸುಗಮಗೊಳಿಸುವುದು ಮತ್ತು - ಮಹಿಳೆಯರ ಮೇಲೆ ಪರಿಣಾಮ ಬೀರುವ ಎಲ್ಲಾ ನೀತಿ ಸಂಬಂಧಿತ ವಿಷಯಗಳನ್ನು ಕುರಿತು ಸರ್ಕಾರಕ್ಕೆ ಸಲಹೆ ನೀಡುವುದು.