* 'ರಾಷ್ಟೀಯ ಆರೋಗ್ಯ ಮಿಷನ್'(NHM) ಯೋಜನೆಯನ್ನು ಇನ್ನೂ ಐದು ವರ್ಷಗಳ ಕಾಲ ಮುಂದುವರಿಸಲು ಕೇಂದ್ರ ಸಂಪುಟ ಸಭೆ ಬುಧವಾರ (ಜನವರಿ 22) ಅನುಮೋದನೆ ನೀಡಿದೆ.* ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು "ಕಳೆದ 10 ವರ್ಷಗಳಲ್ಲಿ ಈ ಕಾರ್ಯಕ್ರಮವು ತನ್ನ ಗುರಿಗಳನ್ನು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ'' ಎಂದು ಹೇಳಿದರು.* 2021ರಿಂದ 2022ರಲ್ಲಿ ಸುಮಾರು 12 ಲಕ್ಷ ಆರೋಗ್ಯ ಕಾರ್ಯಕರ್ತರು ಈ ಕಾರ್ಯಕ್ರಮದೊಂದಿಗೆ ಕೈ ಜೋಡಿಸಿದ್ದರು. ಇದೇ ಕಾರ್ಯಕ್ರಮದ ಅಡಿಯಲ್ಲೇ ನಾವು ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸಿದೆವು,'' ಎಂದರು.* ರಾಷ್ಟ್ರೀಯ ಆರೋಗ್ಯ ಮಿಷನ್ (NHM) ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (NRHM) ಮತ್ತು ರಾಷ್ಟ್ರೀಯ ನಗರ ಆರೋಗ್ಯ ಮಿಷನ್ (NUHM) ಎಂಬ ಎರಡು ಉಪ-ಮಿಷನ್ಗಳನ್ನು ಒಳಗೊಂಡಿದೆ.* ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವುದು, ಸಂತಾನೋತ್ಪತ್ತಿ-ತಾಯಿಯ- ನವಜಾತ ಶಿಶುಗಳು ಮತ್ತು ಹದಿಹರೆಯದವರ ಆರೋಗ್ಯ (RMNCH+A), ಮತ್ತು ಸಂವಹನ ಮತ್ತು ಸಾಂಕ್ರಾಮಿಕವಲ್ಲದ ರೋಗಗಳು ಇವು ಮುಖ್ಯ ಪ್ರೋಗ್ರಾಮ್ಯಾಟಿಕ್ ಘಟಕಗಳಾಗಿವೆ.